ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹11,344 ಕೋಟಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ–ಮೆಹುಲ್ ಚೋಕ್ಸಿ ಒಡೆತನಕ್ಕೆ ಸೇರಿದ ಒಂಬತ್ತು ಐಷಾರಾಮಿ ಕಾರುಗಳನ್ನು ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಧಿಕಾರಿಗಳು ಜಪ್ತಿ ಮಾಡಿರುವ ಕಾರುಗಳ ಪೈಕಿ ರೋಲ್ಸ್ ರಾಯ್ಸ್ ಘೋಸ್ಚ್, ಫಾರ್ಷ್ ಪನಮೆರಾ, 2 ಮರ್ಸಿಡೀಸ್ ಬೆಂಜ್ ಜಿಎಲ್ 350 ಸಿಡಿಐ, ಮೂರು ಹೋಂಡಾ ಕಾರುಗಳು, ಟೋಯೋಟಾ ಫಾರ್ಚುನರ್ ಮತ್ತು ಟೋಯೊಟಾ ಇನ್ನೋವಾ ಕಾರುಗಳನ್ನು ಆಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಮುಂಬೈ ಬಳಿಯ ಅಲಿಬಾಗ್‌ನಲ್ಲಿರುವ ನೀರವ್ ಮೋದಿಯ ₹32 ಕೋಟಿ ವೆಚ್ಚದ ಐಷಾರಾಮಿ ತೋಟದ ಮನೆಯನ್ನು ಸಿಬಿಐ ಅಧಿಕಾರಿಗಳು ಬುಧವಾರ ಬೀಗ ಜಡಿದಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಕ್ಕೆ ಮುಂದಾಗಿರುವ ಜಾರಿ ನಿರ್ದೇಶನಾಲಯ ಗಿಲಿ ಇಂಡಿಯಾ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಅನಿಯತ್ ಶಿವರಾಮನ್ ಅವರ ನಿವಾಸವನ್ನು ಸಹ ಜಪ್ತಿ ಮಾಡಿದ್ದಾರೆ.