ಎಸ್ಸೆಸ್ಸೆಲ್ಸಿ ಎಕ್ಸಾಂಗೆ ಹೊಸ ನಿರ್ಬಂಧ

ಗುರುವಾರ, 12 ಜನವರಿ 2017 (12:08 IST)
ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿ ತಂದಿರುವ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಪರೀಕ್ಷೆಗೆ ತಡವಾಗಿ  ಬರುವವರಿಗೆ ಪರೀಕ್ಷಾ ಕೊಠಡಿಯಲ್ಲಿ ಪ್ರವೇಶವನ್ನು ನೀಡಲಾಗುವುದಿಲ್ಲ.

 
ಪ್ರಸಕ್ತ ಸಾಲಿನಿಂದಲೇ ಈ ಆದೇಶ ಅನುಷ್ಠಾನಕ್ಕೆ ಬರಲಿದ್ದು, ತಡವಾಗಿ ಬರುವ ವಿದ್ಯಾರ್ಥಿಗಳು ಸೂಕ್ತ ಕಾರಣಗಳನ್ನು ನೀಡಿದರೆ ಮಾತ್ರ ಪ್ರವೇಶವನ್ನು ನೀಡಲಾಗುತ್ತದೆ.
 
ಈ ಬಾರಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ದಿನಗಳಂದು ಬೆಳಿಗ್ಗೆ 9.30 ರೊಳಗೆ ಪರೀಕ್ಷಾ ಕೊಠಡಿಯಲ್ಲಿ ಇರಲೇಬೇಕು. ತಡವಾಗಿ ಬಂದರೆ ಪ್ರವೇಶ ನಿರಾಕರಿಸಲಾಗುತ್ತದೆ  ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.
 
ಯಾವುದೇ ಕಾರಣ ಒದಗಿಸಿದರೆ ಮಾನ್ಯತೆ ನೀಡಲಾಗುವುದಿಲ್ಲ. ಆರೋಗ್ಯ ಅಥವಾ ಇನ್ಯಾವುದೋ ಗಂಭೀರ ಕಾರಣವಿದ್ದರೆ ಮಾತ್ರ ಪರಿಗಣಿಸಿ ಅವಕಾಶ ನೀಡುವ ಕುರಿತು ಪರೀಕ್ಷಾ ಮಂಡಳಿ ಚಿಂತೆ ನಡೆಸಿದೆ. 
 
ಪರೀಕ್ಷೆಯಲ್ಲಿ ಪಾರದರ್ಶಕತೆ ತರಲು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಂಡಳಿ ನಿರ್ದೇಶಕಿ ಯಶೋಧಾ ಬೋಪಣ್ಣ ತಿಳಿಸಿದ್ದಾರೆ.
 
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾರ್ಚ್ 30ರಿಂದ ಏಪ್ರಿಲ್ 12ರವರೆಗೆ ನಡೆಯಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ