ವರದಕ್ಷಿಣೆ ಭೂತ: ನವವಿವಾಹಿತೆ ಕತ್ತು ಸೀಳಿ ಕೊಂದ ಮಾವ

ಭಾನುವಾರ, 13 ನವೆಂಬರ್ 2016 (15:53 IST)
ವರದಕ್ಷಿಣೆ ಭೂತ ಬಡಿದುಕೊಂಡಿದ್ದ ಪಾಪಿ ಮಾವನೊಬ್ಬ ತನ್ನ ಸೊಸೆಯನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದ ಘಟನೆ ಮುಜಾಪರ್ ನಗರದಲ್ಲಿ ನಡೆದಿದೆ. 
 
ಜಿಲ್ಲೆಯ ಸಿಕ್ರೇಡಾ ಗ್ರಾಮದಲ್ಲಿ  ಈ ಹೇಯ ಘಟನೆ ನಡೆದಿದ್ದು, ಆರೋಪಿಯನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. 
ಮೃತ ಸರಿತಾ ಶುಕ್ರವಾರದಿಂದ ನಾಪತ್ತೆಯಾಗಿದ್ದಾಳೆ ಎಂದು ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆ ಪೊಲೀಸರು ತನಿಖೆ ನಡೆಸಿದಾಗ ಆಕೆ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ.
 
ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಆತ ಆಕೆಯನ್ನು ಕೊಂದು ಚರಂಡಿಯೊಳಗೆ ಹಾಕಿರುವುದಾಗಿ ಬಾಯ್ಬಿಟ್ಟಿದ್ದಾನೆ.
 
ಮೃತಳ ಶವವನ್ನು ಪತ್ತೆ ಹಚ್ಚಿರುವ ಪೊಲೀಸರು ಅದನ್ನು ಮರಣೊತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
 
ಕಳೆದ ಎಪ್ರಿಲ್ ತಿಂಗಳಲ್ಲಿ ಆರೋಪಿಯ ಮಗ ರಾಜ್ ಕುಮಾರ್‌ನನ್ನು ವಿವಾಹವಾಗಿದ್ದ ಸರಿತಾ ಪತಿ ಸೇರಿದಂತೆ ಅತ್ತೆಮಾವಂದಿರಿಂದ ವರದಕ್ಷಿಣೆ ಹಿಂಸೆಯನ್ನು ಅನುಭವಿಸುತ್ತಿದ್ದಳು.
 
ಪತಿ ಸೇರಿದಂತೆ ಇತರ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ