ವಿಮಾನವೇರಿ ಜಪಾನ್‌ಗೆ ತಲುಪಿದ ಬನ್ನೇರುಘಟ್ಟದ ಆನೆಗಳ ಮೊದಲ ವಿಡಿಯೋ ಇಲ್ಲಿದೆ

Sampriya

ಭಾನುವಾರ, 27 ಜುಲೈ 2025 (15:21 IST)
Photo Credit X
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಜಪಾನ್‌ಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ನಾಲ್ಕು ಆನೆಗಳು ಇದೀಗ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.

ಸರಕು ಸಾಗಾಣೆ ವಿಮಾನದ ಮೂಲಕ ಬನ್ನೇರುಘಟ್ಟದ ಸುರೇಶ್‌, ಗೌರಿ, ಶ್ರುತಿ(7) ಮತ್ತು ತುಳಸಿ(5) ಆನೆಗಳನ್ನು ಜಪಾನ್‌ಗೆ ಕಳುಹಿಸಿಕೊಡಲಾಯಿತು. 

ಆನೆಗಳಿಗೆ ತಯಾರಿಸಿದ್ದ ಪೆಟ್ಟಿಗೆಯಲ್ಲಿ ಪ್ರತ್ಯೇಕವಾಗಿ ಆನೆಗಳನ್ನು ಸಾಗಿಸಲಾಯಿತು. ಅಲ್ಲಿನ ವಿಮಾನ ನಿಲ್ದಾಣ ತಲುಪಿದ ಬಳಿಕ ಪೆಟ್ಟಿಗೆಗಳನ್ನು ಲಾರಿಯಲ್ಲಿ ಇರಿಸಿ ಹಿಮೇಜಿ ಪಾರ್ಕ್‌ಗೆ ಸಾಗಿಸಲಾಯಿತು. 

ಸದ್ಯ ಆನೆಗಳು ಹೊಸ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ.  ಜಪಾನ್‌ಗೆ ತೆರಳಿದ ಆನೆಗಳಿಗೆ ಮೊದಲ ದಿನ ಭಾರತ ಶೈಲಿಯ ಆಹಾರವನ್ನೇ ನೀಡಲಾಯಿತು. ಇದಕ್ಕಾಗಿ ರಾಗಿ ಮತ್ತು ಅಕ್ಕಿಯನ್ನು ಕೊಂಡಯ್ಯಲಾಗಿದೆ. 

ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ಜಪಾನ್‌ನ ಹಿಮೇಜಿ ಸಫಾರಿ ಉದ್ಯಾನಕ್ಕೆ ವಿಮಾನದ ಮೂಲಕ ಆನೆಗಳನ್ನು ಕಳುಹಿಸಿಕೊಡಲಾಯಿತು. ಇನ್ನೂ ಆನೆಗಳು ಅಲ್ಲಿನ ವಾತಾವರಣ ಹಾಗೂ ಜನರಿಗೆ ಹೊಂದಿಕೊಳ್ಳುವ ಸಲುವಾಗಿ ಇಲ್ಲಿನ ಉದ್ಯಾನವನದ ಸಿಬ್ಬಂದಿಗಳೇ ಹೋಗಿದ್ದಾರೆ. 

ಇದಿಗ ವಿಮಾನ ಏರಿದ ಬನ್ನೇರುಘಟ್ಟ ಆನೆಗಳು ಜಪಾನ್‌ನಲ್ಲಿ ರಿಲ್ಯಾಜಪಾನ್‌ ಜೂ ತಲುಪಿದ ಬನ್ನೇರುಘಟ್ಟ ಆನೆಗಳು


In a landmark move for #wildlife conservation & international cooperation,4 #elephants from #Bengaluru’s #Bannerghatta Biological Park,Suresh (8),Gowri (9), Shruthi (7) & Tulsi (5) were airlifted to #Japan as part of Global Animal Exchange Programme.@bannerghattazoo @aranya_kfd pic.twitter.com/efQnrrYYS3

— Yasir Mushtaq (@path2shah) July 26, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ