ಜೈಲು ಗೋಡೆಗೆ ತಲೆಚಚ್ಚಿಕೊಂಡ ನಿರ್ಭಯಾ ಗ್ಯಾಂಗ್ ರೇಪಿಸ್ಟ್

ಗುರುವಾರ, 20 ಫೆಬ್ರವರಿ 2020 (09:34 IST)
ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪಿಸ್ಟ್ ಗಳ ಪೈಕಿ ಒಬ್ಬ ವಿನಯ್ ಶರ್ಮಾ ಜೈಲ್ ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.


ಮಾರ್ಚ್ 3 ರಂದು ನಾಲ್ವರು ಗ್ಯಾಂಗ್ ರೇಪಿಸ್ಟ್ ಗಳಿಗೆ ಗಲ್ಲು ಶಿಕ್ಷೆ ವಿಧಿಸಲು ದೆಹಲಿ ಕೋರ್ಟ್ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಅಪರಾಧಿಗಳಲ್ಲೊಬ್ಬಾತ ವಿನಯ್ ಶರ್ಮಾ ಜೈಲ್ ನ ತನ್ನ ಕೊಠಡಿಯಲ್ಲಿ ಗೋಡೆಗೆ ತಲೆಗೆ ಚಚ್ಚಿಕೊಂಡು ಗಾಯ ಮಾಡಿಕೊಂಡಿದ್ದಾನೆ.

ಇದಕ್ಕೂ ಮೊದಲು ವಿನಯ್ ಪರ ವಕೀಲರು ಆತ ಮಾನಸಿಕವಾಗಿ ಖಿನ್ನನಾಗಿದ್ದು, ಜೈಲ್ ನಲ್ಲಿ ಆತನ ಮೇಲೆ ಹಲ್ಲೆ ನಡೆದಿದೆ. ಇದರಿಂದ ಗಾಯಗೊಂಡಿದ್ದಾನೆ ಎಂದು ಕೋರ್ಟ್ ಮುಂದೆ ವಾದಿಸಿದ್ದರು. ಹೀಗಾಗಿ ಆತನ ಮೇಲೆ ನಿಗಾ ವಹಿಸುವಂತೆ ಕೋರ್ಟ್ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ