ಪ್ರಿಯಕರನೊಂದಿಗೆ ಜೀವನ ನಡೆಸಲು ಹೆತ್ತ ಮಗುವನ್ನೇ ಕೊಂದ ತಾಯಿ!

ಗುರುವಾರ, 20 ಫೆಬ್ರವರಿ 2020 (09:19 IST)
ತಿರುವನಂತಪುರಂ: ಪ್ರಿಯಕರನೊಂದಿಗೆ ಹೊಸ ಜೀವನ ನಡೆಸುವ ಉದ್ದೇಶದಿಂದ ತನ್ನ ಒಂದೂವರೆ ವರ್ಷದ ಎಳೆ ಮಗನನ್ನು ಹೆತ್ತ ತಾಯಿಯೇ ಕೊಲೆಗೈದ ಘಟನೆ ಕೇರಳದಲ್ಲಿ ನಡೆದಿದೆ.


ಆರೋಪಿ ಶರಣ್ಯ ಎಂಬಾಕೆಯನ್ನು ಈ ಸಂಬಂಧ ಬಂಧಿಸಲಾಗಿದೆ. ಈಕೆ ತನ್ನ ಗಂಡನಿಗೆ ಕೈಕೊಟ್ಟು ಪ್ರಿಯಕರನ ಜತೆ ಜೀವನ ಸಾಗಿಸಲು ಉದ್ದೇಶಿಸಿದ್ದಳು. ಅದಕ್ಕಾಗಿ ತನ್ನ ಎಳೆ ಮಗುವನ್ನು ಚಚ್ಚಿ ಕೊಲೆ ಮಾಡಿ ತನ್ನ ಗಂಡನೇ ಈ ಕೊಲೆ ಮಾಡಿದ್ದು ಎಂದು ನಾಟಕವಾಡಿದ್ದಳು.

ಆದರೆ ತನಿಖೆ ನಡೆಸಿದ ಪೊಲೀಸರಿಗೆ ನಿಜಾಂಶ ಗೊತ್ತಾಗಿದ್ದು, ಇದೀಗ ಶರಣ್ಯಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ