ಸರಣಿ ಹಂತಕನನ್ನು ಕೊನೆಗೂ ಸೆರೆ ಹಿಡಿದ ಪೊಲೀಸರು

ಬುಧವಾರ, 19 ಫೆಬ್ರವರಿ 2020 (09:28 IST)
ನವದೆಹಲಿ: ಕಳೆದ ಎರಡು ದಶಕಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ಸರಣಿ ಹಂತಕ ಅವಿನಾಶ್ ಕುಮಾರ್ ಪಾಂಡೆಯನ್ನು ದೆಹಲಿ ಪೊಲೀಸರು ಕೊನೆಗೂ ಸೆರೆ ಹಿಡಿದಿದ್ದಾರೆ.


38 ವರ್ಷದ ಅವಿನಾಶ್ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ತನ್ನ ಪಾಪ ಕೃತ್ಯದ ಆರಂಭ ಮಾಡಿದ್ದ. ಬಳಿಕ ಮುಂಬೈಯಲ್ಲಿ ತಲೆಮರೆಸಿಕೊಂಡಿದ್ದ. ವಿವಿಧೆಡೆ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ ಈತ ಹಲವು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ.

ಕ್ಷುಲ್ಲುಕ ಕಾರಣಗಳಿಗೆ ತನ್ನ ಸಹ ಒಡನಾಡಿಗಳನ್ನೇ ಕೊಲೆ ಮಾಡಿದ್ದ ಈತ ಮೊಬೈಲ್ ಕೂಡಾ ಬಳಸುತ್ತಿರಲಿಲ್ಲ. ಅಲ್ಲದೆ ಬೇರೆ ಬೇರೆ ನಗರಗಳಿಗೆ ವಲಸೆ ಹೋಗಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದಂತೆ ನೋಡಿಕೊಳ್ಳುತ್ತಿದ್ದ. ಈತನ ಪತ್ತೆಗೆ ಪೊಲೀಸರು 10000 ರೂ. ಬಹುಮಾನವನ್ನೂ ಘೋಷಿಸಿದ್ದರು. ಕೊನೆಗೂ ಈಗ ದೆಹಲಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ