ನಿರ್ಮಲಾ ಪ್ಯಾಕೇಜ್ 3: ಕರ್ನಾಟಕದ ರಾಗಿಗೆ ಇನ್ನು ರಾಜಯೋಗ

ಶುಕ್ರವಾರ, 15 ಮೇ 2020 (16:57 IST)
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೂರನೇ ಹಂತದ ಪ್ಯಾಕೇಜ್ ಘೋಷಿಸಿದ್ದು, ಇದರಲ್ಲಿ ಕೃಷಿ ಮೂಲಸೌಕರ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.


ಕೃಷಿ ಮೂಲ ಸೌಕರ್ಯಾಭಿವೃದ್ಧಿ ನಿಧಿಗೆ 1 ಲಕ್ಷ ಕೋಟಿ ರೂ. ಮೀಸಲಿಡುವುದಾಗಿ ವಿತ್ತ ಸಚಿವೆ ಘೋಷಿಸಿದ್ದಾರೆ. ಜೇನು ಸಾಕಣೆಗೆ 500 ಕೋಟಿ ರೂ., ಪಶುಸಂಗೋಪನೆ, ಟೊಮ್ಯಾಟೋ, ಈರುಳ್ಳಿ, ಆಲೂಗಡ್ಡೆ ಬೆಳೆ ಸಂಸ್ಕರಣೆಗೆ 500 ಕೋಟಿ ರೂ. ಮತ್ತು ಸಾಗಾಟಕ್ಕೆ ಶೇ. 50 ರಷ್ಟು ಸಬ್ಸಿಡಿ ನೀಡುವುದಾಗಿ ಸಚಿವೆ ಘೋಷಿಸಿದ್ದಾರೆ.

ವಿಶೇಷವಾಗಿ ಕರ್ನಾಟಕದ ರಾಗಿ, ತಮಿಳುನಾಡಿನ ಅರಿಶಿಣ ಬೆಳೆ ಬಗ್ಗೆ ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್, ಸಾವಯವ ಪದ್ಧತಿ ಕೃಷಿಗೆ ಪ್ರೋತ್ಸಾಹ ನೀಡುವುದಲ್ಲದೆ,  ಈ ಕೃಷಿ ಉತ್ಪನ್ನಗಳ ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ಮಾಡುವುದಾಗಿ ಹೇಳಿದ್ದಾರೆ. ಬ್ರ್ಯಾಂಡಿಂಗ್ ಮೂಲಕ ಈ ಉತ್ಪನ್ನಗಳ ಆಹಾರ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದ್ದಾರೆ.

ಇನ್ನು ಮೀನುಗಾರಿಕೆಗೆ 55 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ಮೀನುಗಾರರಿಗೆ ಬೋಟ್, ಮತ್ತಿತರ ಉಪಕರಣ ಖರೀದಿಗೆ ಸಾಲ ಒದಗಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಇದರ ಜತೆಗೆ ಸಾವಯವ ಕೃಷಿ, ಆಹಾರ, ಔಷಧಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಪ್ರಧಾನ ಮಂತ್ರಿ ಈ ಮೊದಲು ಕರೆಕೊಟ್ಟಂತೆ ಸ್ವದೇಶೀ ವಸ್ತುಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ