ಇಂದು ರಕ್ಷಣಾ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ನಿರ್ಮಲಾ ಸೀತಾರಾಮನ್

ಗುರುವಾರ, 7 ಸೆಪ್ಟಂಬರ್ 2017 (15:30 IST)
ದೇಶದ ಮೊದಲ ಸಂಪೂರ್ಣಾವಧಿ ರಕ್ಷಣಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ. 
ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ರಕ್ಷಣಾ ವಲಯದಲ್ಲಿ ಸ್ಥಳೀಯ ಉತ್ಪಾದನೆಗೆ "ಪ್ರಾಮುಖ್ಯತೆ, ಆದ್ಯತೆ ಮತ್ತು ಗಮನ" ನೀಡುತ್ತೇನೆ ಎಂದು ತಿಳಿಸಿದ್ದಾರೆ.
 
ರಕ್ಷಣಾ ಕ್ಷೇತ್ರದ ಸರಕಾರಿ ಸಂಚಾಲಿತ ಸಂಸ್ಥೆಗಳು ಉತ್ಪಾದಿಸಿದ ಆರು ನೂತನ ಉತ್ಪನ್ನಗಳನ್ನು ಸೇನೆಗೆ ಹಸ್ತಾಂತರಿಸಿದ ಅವರು, ದೇಶದ ಭದ್ರತೆ ಮತ್ತು ಸುರಕ್ಷತೆಗಾಗಿ ಮೇಕ್ ಇನ್ ಇಂಡಿಯಾ ಯೋಜನೆಗೆ ಆದ್ಯತೆ, ಮಹತ್ವ ಮತ್ತು ಗಮನ ನೀಡುವುದಾಗಿ ಘೋಷಿಸಿದ್ದಾರೆ.
 
ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನಿರ್ಗಮನದ ನಂತರ ರಕ್ಷಣಾ ಸಚಿವಾಲಯದ ಹೆಚ್ಚುವರಿ ಹೊಣೆ ಹೊತ್ತಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ, ಇದೀಗ ತಮ್ಮ ಹೆಚ್ಚುವರಿ ಹೊಣೆಯನ್ನು ನಿರ್ಮಲಾ ಸೀತಾರಾಮನ್ ಅವರಿಗೆ ವಹಿಸಿದ್ದಾರೆ.
 
ಭಾರತದ ವಿಶ್ವದಲ್ಲಿಯೇ ಶಸ್ತ್ರಾಸ್ತ್ರ ಮತ್ತು ಸೇನಾಉಪಕರಣಗಳನ್ನು ಅಮುದು ಪಡೆಯುವಲ್ಲಿ ಅಗ್ರಸ್ಥಾನ ಪಡೆದಿದೆ. ನಮ್ಮದೇ ಆದ ಮೇಕ್ ಇನ್ ಇಂಡಿಯಾ ಮೂಲಕ ಶಸ್ತ್ರಾಸ್ತ್ರ ಮತ್ತು ಸೇನಾ ಉಪಕರಣಗಳ ತಯಾರಿಕೆಗೆ ಸಂಪೂರ್ಣ ಆದ್ಯತೆ ನೀಡಬೇಕಾಗಿದೆ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ