ನೀತಿ ಆಯೋಗ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀವ್ ಕುಮಾರ್ ದಿಢೀರ್ ರಾಜೀನಾಮೆ
ಕೇಂದ್ರ ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀವ್ ಕುಮಾರ್ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅವರ ಜಾಗಕ್ಕೆ ಕೂಡಲೇ ಕೇಂದ್ರ ಸರಕಾರ ಸುಮನ್ ಕೆ ಬೆರಿ ಅವರನ್ನು ನೇಮಿಸಿದೆ.
ಏಪ್ರಿಲ್ ೩೦ಕ್ಕೆ ರಾಜೀವ್ ಕುಮಾರ್ ಅವರ ಅವಧಿ ಮುಕ್ತಾಯಗೊಳ್ಳುತ್ತಿತ್ತು. ಆದರೆ ಕೆಲವೇ ದಿನಗಳು ಬಾಕಿ ಇರುವಾಗಲೇ ಅವರು ರಾಜೀನಾಮೆ ನೀಡಿರುವುದು ಅಚ್ಚರಿ ಮೂಡಿಸಿದೆ.
ವಿಸಿ ಅರವಿಂದ್ ಶೈಕ್ಷಣಿಕ ವೃತ್ತಿಜೀವನಕ್ಕೆ ಮರಳುವ ಉದ್ದೇಶದಿಂದ ರಾಜೀನಾಮೆ ನೀಡಿದ ನಂತರ ರಾಜೀವ್ ಕುಮಾರ್ ಅಧಿಕಾರ ಪಡೆದಿದ್ದು, ಆರ್ಥಿಕ ತಜ್ಞರಾಗಿ ಗುರುತಿಸಿಕೊಂಡಿದ್ದ ಅವರು ೨೦೧೭ರಲ್ಲಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು.
ಇದೇ ವೇಳೆ ಸುಮನ್ ಕೆ ಬೆರಿ ಮೇ ೧ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸುಮನ್ ಕೆ ಬೆರಿ ಇದಕ್ಕೂ ಮುನ್ನ ರಾಷ್ಟ್ರೀಯ ಅಪ್ಲೈಡ್ ಎಕಾನಾಮಿಕ್ ರಿಸರ್ಚರ್ಸ್ (ಎನ್ ಸಿಎಇಆರ್) ಪ್ರಧಾನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.