ಅಮಿತ್ ಶಾ ತಂತ್ರ ಸಫಲ: ಎನ್‌ಡಿಎದೊಂದಿಗೆ ವಿಲೀನವಾದ ಜೆಡಿಯು ಪಕ್ಷ

ಶನಿವಾರ, 19 ಆಗಸ್ಟ್ 2017 (18:32 IST)
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಇಂದು ಸಭೆ ನಡೆಸಿ ಎನ್‌ಡಿಎ ಪಕ್ಷದೊಂದಿಗೆ ವಿಲೀನವಾಗುವ ನಿರ್ಣಯವನ್ನು ಅಂಗೀಕರಿಸಿದೆ. 
ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ, ಜೆಡಿಯು ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಳ್ಳುವ ನಿರ್ಣಯವನ್ನು ಒಮ್ಮತದಿಂದ ಅಂಗೀಕರಿಸಿದೆ ಎಂದು ಹಿರಿಯ ಜೆಡಿ (ಯು) ನಾಯಕ ಕೆ.ಸಿ ತ್ಯಾಗಿ ತಿಳಿಸಿದ್ದಾರೆ.
 
ಜೆಡಿ (ಯು) ನಾಯಕರ ಪ್ರಕಾರ, 70 ಶಾಸಕರು, ಇಬ್ಬರು ಲೋಕಸಭಾ ಎಂಪಿಗಳು ಮತ್ತು ಏಳು ರಾಜ್ಯ ಸಭೆ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
 
ಜೆಡಿಯು ಪಕ್ಷದ ಮಾಜಿ ಅದ್ಯಕ್ಷ ಶರದ್ ಯಾದವ್ ನೇತೃತ್ವದ ನಿಯೋಗ, ಚುನಾವಣೆ ಆಯೋಗವನ್ನು ಭೇಟಿ ಮಾಡಿ ಪಕ್ಷದ ಚಿಹ್ನೆ(ಬಾಣ)ಯನ್ನು ತಮ್ಮ ಬಣಕ್ಕೆ ನೀಡಬೇಕು ಎಂದು ಒತ್ತಾಯಿಸಿರುವ ಮಧ್ಯೆಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೀಡಿದ ಆಹ್ವಾನಕ್ಕೆ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮ್ಮತಿ ಸೂಚಿಸಿದೆ.
  
ಜೆಡಿಯು ಪಕ್ಷದ ಚಿಹ್ನೆಯಾದ ಬಾಣದ ಗುರುತನ್ನು ನಮಗೆ ನೀಡುವಂತೆ ಕೇಂದ್ರ ಚುನಾವಣೆ ಆಯೋಗವನ್ನು ಕೋರುತ್ತಿದ್ದೇವೆ. ಶರದ್ ಯಾದವ್ ನೇತೃತ್ವದ ಜೆಡಿಯು ನಮ್ಮ ನಿಜವಾದ ಪಕ್ಷವಾಗಿದೆಯೇ ಹೊರತು ನಿತೀಶ್ ಕುಮಾರ್ ಅವರದ್ದಲ್ಲ ಎಂದು ಹಿರಿಯ ಜೆಡಿಯು ನಾಯಕ ಅರುಣ್ ಶ್ರೀವಾತ್ಸವ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ