ದೆಹಲಿಯಲ್ಲಿ ಗೆದ್ದರೂ ಬಿಜೆಪಿ ಸೆಲೆಬ್ರೇಷನ್ ಇಲ್ಲ! ಕಾರಣ ಗೊತ್ತಾ?
ಬುಧವಾರ, 26 ಏಪ್ರಿಲ್ 2017 (11:49 IST)
ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದತ್ತ ಸಾಗಿದೆ. ದೊಡ್ಡ ಗೆಲುವು ಸಿಕ್ಕಿದರೂ ಪಕ್ಷ ಸಂಭ್ರಮಾಚರಣೆ ಮಾಡದಿರಲು ನಿರ್ಧರಿಸಿದೆ. ಅದಕ್ಕೆ ಕಾರಣ ಏನು ಗೊತ್ತೇ?
ಸುಕ್ಮಾ ದಾಳಿ. ಸುಕ್ಮಾದಲ್ಲಿ ನಕ್ಸಲರ ದಾಳಿಗೆ 25 ಸಿಆರ್ ಪಿಎಫ್ ಯೋಧರು ಪ್ರಾಣ ಕಳೆದುಕೊಂಡಿದ್ದರು. ಇಂತಹ ದುಃಖದ ಸಂದರ್ಭದಲ್ಲಿ ಗೆಲುವಿನ ಸಂಭ್ರಮ ಬೇಡವೆಂದು ದೆಹಲಿ ಬಿಜೆಪಿ ಘಟಕ ತೀರ್ಮಾನಿಸಿದೆ.
ಸದ್ಯಕ್ಕೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ 141 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಎಎಪಿ 40 ಸ್ಥಾನಗಳೊಂದಿಗೆ ದ್ವಿತೀಯ ಹಾಗೂ 38 ಸ್ಥಾನ ಗಳಿಸಿದ ಕಾಂಗ್ರೆಸ್ ತೃತೀಯ ಸ್ಥಾನದಲ್ಲಿದೆ. ಹಾಗಿದ್ದರೂ ನಾವು ಸಂಭ್ರಮಾಚರಣೆ ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮನೋಜ್ ತಿವಾರಿ ಹೇಳಿದ್ದಾರೆ.
ಅತ್ತ ಕಾಂಗ್ರೆಸ್ ಈ ಸೋಲಿನೊಂದಿಗೆ ಒಡೆದ ಮನೆಯಂತಾಗಿದೆ. ಮಾಜಿ ಸಿಎಂ ಶೀಲಾ ದೀಕ್ಷಿತ್ ನನ್ನನ್ನು ಪ್ರಚಾರಕ್ಕೆ ಕರೆಯಲಿಲ್ಲ. ದೆಹಲಿ ಕಾಂಗ್ರೆಸ್ ದಯನೀಯ ಪರಿಸ್ಥಿತಿಯಲ್ಲಿದೆ ಎಂದಿದ್ದಾರೆ. ಅತ್ತ ಎಎಪಿ ತಮ್ಮ ಸೋಲಿಗೆ ಮತಯಂತ್ರದ ದೋಷವೇ ಕಾರಣ ಎಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ