ತಾಜ್‌ಮಹಲ್ ಭೇಟಿ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯುವುದರಿಂದ, ತಾಜ್‌ಮಹಲ್‌ನ್ನು ಯಾರೂ ದೂಷಿಸಬಾರದು. ತಾಜ್‌ಮಹಲ್ ನಮ್ಮ ಸಂಸ್ಕ್ರತಿ ಮತ್ತು ಇತಿಹಾಸದ ಭಾಗವಾಗಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದೀಗ ಉಲ್ಟಾ ಹೊಡೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಜ್‌ಮಹಲ್ ನಮ್ಮ ಸಂಸ್ಕ್ರತಿ ಮತ್ತು ಇತಿಹಾಸದ ಭಾಗವಾಗಿದೆ. ನಾನು ತಾಜ್‌ಮಹಲ್‌ಗೆ ಭೇಟಿ ನೀಡಿ ತಾಜ್ ಸ್ಮಾರಕ ನಮ್ಮ ಪರಂಪರೆಯ ಭಾಗವೆಂದು ಅಂತರರಾಷ್ಟ್ರೀಯ ಸಮುದಾಯಕ್ಕೆ ಸಂದೇಶವನ್ನು ಕಳುಹಿಸಲು ಬಯಸುತ್ತೇನೆ. ಅದನ್ನು ಯಾರೂ ದೂಷಿಸಲು ಪ್ರಯತ್ನಿಸಬಾರದು ಎಂದು ಕೋರಿದ್ದಾರೆ.
ಇದು ರಾಜ್ಯದಲ್ಲಿ ಅತಿ ಹೆಚ್ಚಿನ ಪ್ರವಾಸೋದ್ಯಮ ಆದಾಯವನ್ನು ಗಳಿಸಿದರೂ ಸಹ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶ ಸರ್ಕಾರ ತನ್ನ ಪ್ರವಾಸೋದ್ಯಮ ಪುಸ್ತಕದಲ್ಲಿ ಸಾಂಪ್ರದಾಯಿಕ ಮೊಘಲ್ ವಾಸ್ತುಶಿಲ್ಪವಾದ ತಾಜ್‌ಮಹಲ್‌ನ್ನು ನಮೂದಿಸುವುದನ್ನು ಮರೆತುಹೋಗಿತ್ತು,