ಕೆಂಪುಕೋಟೆ ಕಟ್ಟಿದವರೂ ದ್ರೋಹಿಗಳೇ… ಪ್ರಧಾನಿ ಧ್ವಜ ಹಾರಿಸುವುದು ನಿಲ್ಲಿಸುವರೇ: ಓವೈಸಿ
ಮಂಗಳವಾರ, 17 ಅಕ್ಟೋಬರ್ 2017 (09:16 IST)
ನವದೆಹಲಿ: ತಾಜ್ ಮಹಲ್ ಕಟ್ಟಿದವರು ದ್ರೋಹಿಗಳು. ಹಾಗಿದ್ದರೆ ಕೆಂಪು ಕೋಟೆಯನ್ನೂ ಸಹ ದ್ರೋಹಿಗಳೇ ನಿರ್ಮಿಸಿದ್ದು. ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ತಿರಂಗ ಹಾರಿಸುವುದನ್ನು ನಿಲ್ಲಿಸುತ್ತಾರೆಯೇ ಎಂದು ಎಐಎಂಐಎಂಎಸ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ದ್ರೋಹಿಗಳು ಕೆಂಪುಕೋಟೆಯನ್ನೂ ನಿರ್ಮಿಸಿದ್ದಾರೆ. ಹಾಗಾದ್ರೆ ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ಧ್ವಜ ಹಾರಿಸುವುದನ್ನು ನಿಲ್ಲಿಸುತ್ತಾರೆಯೇ ಎಂದು ಟ್ವೀಟ್ ಮಾಡಿದ್ದಾರೆ. ದೇಶ ಮತ್ತು ವಿದೇಶದ ಪ್ರವಾಸಿಗರಿಗೆ ತಾಜ್‌ಮಹಲ್‌ಗೆ ಭೇಟಿ ನೀಡದಂತೆ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಹೇಳುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶ ಸರ್ಧಾನಾ ಕ್ಷೇತ್ರದ ಬಿಜೆಪಿ ಶಾಸಕ ಸಂಗೀತ್ ಸೋಮ್, ತಾಜ್‌ಮಹಲ್ ಭಾರತದ ಇತಿಹಾಸದಲ್ಲಿಯೇ ಕಪ್ಪುಚುಕ್ಕೆ. ತಾಜ್‌ಮಹಲ್ ಕಟ್ಟಿದವರು ದ್ರೋಹಿಗಳು. ತಾಜ್ ಗೆ ಭಾರತೀಯ ಇತಿಹಾಸದಲ್ಲಿ ಯಾವುದೇ ಸ್ಥಾನವಿಲ್ಲ. ನಾವು ಇತಿಹಾಸವನ್ನು ಬದಲಿಸುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.