ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿ ಮಾತನ್ನಾಡುತ್ತಿದ್ದ ಬಸಿತ್, ಅದು ಸೀಮಿತ ದಾಳಿ ಅಲ್ಲ. ಅಂತಹದ್ದೇನೂ ಅಲ್ಲಿ ನಡೆದಿಲ್ಲ. ಹಾಗಾಗಿದ್ದರೆ ಪಾಕ್ ಪ್ರತೀಕಾರ ತೀರಿಸಿಕೊಳ್ಳುತ್ತಿತ್ತು. ಭಾರತೀಯ ಸೇನೆ ನಡೆಸಿದ್ದು ಗಡಿಯಾಚೆಗಿನ ಫೈರಿಂಗ್ ಅಷ್ಟೇ ಎಂದು ವಾದಿಸಿದ್ದಾರೆ.
ದಾಳಿಯಿಂದ ಪಾಕ್‌ಗೆ ಯಾವ ಸಂದೇಶ ತಲುಪಿದೆ ಎಂದು ಕೇಳಿದ್ದಕ್ಕೆ , ಸೀಮಿತ ದಾಳಿಯೇ ನಡೆದಿಲ್ಲದಿರುವಾಗ, ಪಾಕ್ ಸಂದೇಶ ಪಡೆದುಕೊಳ್ಳುವ ಪ್ರಶ್ನೆ ಎಲ್ಲಿಯದು ಎಂದಿದ್ದಾರೆ ಬಸಿತ್.
ಉರಿ ದಾಳಿಯ ಬಳಿಕ ಪಾಕಿಸ್ತಾನ ಅಂತರಾಷ್ಟ್ರೀಯವಾಗಿ ಏಕಾಂಗಿಯಾಗಿದೆ ಎಂಬುದನ್ನು ನೀವು ಒಪ್ಪಿಕೊಳ್ಳುತ್ತಿರೋ ಎಂದು ಪ್ರಶ್ನಿಸಲಾಗಿ, ಯಾವುದೇ ಇತರ ದೇಶಕ್ಕಿಂತ ಭಯೋತ್ಪಾದನೆಯಿಂದ ಹೆಚ್ಚು ಬಾಧೆಗೊಳಗಾಗಿರುವುದು ಪಾಕಿಸ್ತಾನ ಎಂದುತ್ತರಿಸಿದ್ದಾರೆ ಬಸಿತ್.