ಯಾರು ಕೂಡ ರಾಹುಲ್ ಗಾಂಧಿಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ: ಶಿವರಾಜ್ ಸಿಂಗ್ ಚೌಹಾಣ್

ಗುರುವಾರ, 15 ಡಿಸೆಂಬರ್ 2016 (11:43 IST)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ನನಗೆ ಕನಿಕರವೆನಿಸುತ್ತದೆ. ಅವರ ಮಾತುಗಳನ್ನು ಯಾರು ಕೂಡ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು  ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವ್ಯಂಗ್ಯವಾಡಿದ್ದಾರೆ. 
 
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಮಾತನ್ನಾಡುತ್ತಿದ್ದ ಸಿಎಂ, ಪ್ರಧಾನಿ ಮೋದಿ ಅವರ ಮೇಲೆ ರಾಹುಲ್ ಭ್ರಷ್ಟಾಚಾರ ಆರೋಪ ಹೊರಿಸಿರುವುದಕ್ಕೆ ಪ್ರತಿಕ್ರಿಯಿಸಿಯಿರಿ ಎನ್ನಲಾಗಿ, ರಾಹುಲ್ ಗಾಂಧಿಯನ್ನು ನಮ್ಮ ದೇಶದಲ್ಲಿ ಯಾರು ಕೂಡ ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಅವರನ್ನು ನಂಬುವುದಿಲ್ಲ. ಹೀಗಾಗಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಬೇಕಾಗದ ಅಗತ್ಯವೇ ಇಲ್ಲ ಎಂದಿದ್ದಾರೆ. 
 
ಪ್ರಧಾನಿ ಬಗ್ಗೆ ಹೇಳುವುದಾದರೆ, ಅವರೊಬ್ಬ ಯುಗಪುರುಷ, ನಿಸ್ವಾರ್ಥ ಕರ್ಮಯೋಗಿ, ದೇಶಭಕ್ತ. ದೇಶ ಸುಧಾರಣೆ, ಜನ ಕಲ್ಯಾಣ ಹೊರತು ಪಡಿಸಿ ಬೇರೆನನ್ನು ಅವರು ಯೋಚಿಸಲಾರರು. ಅವರದು ಬಹುದೊಡ್ಡ ವ್ಯಕ್ತಿತ್ವ. ಜತೆಗೆ ಅವರ ನಡೆಯನ್ನು ದೇಶವಾಸಿಗಳು ಕಣ್ಣುಮುಚ್ಚಿಕೊಂಡು ಅವರನ್ನು ಅನುಸರಿಸುತ್ತದೆ. ಮೋದಿ ಹೆಸರು ಈ ರೀತಿಯಲ್ಲಿ ಪವಾಡ ಸೃಷ್ಟಿಸಿರುವುದು ರಾಹುಲ್ ಗಾಂಧಿಗೆ ಬಹಳ ನೋವನ್ನುಂಟು ಮಾಡುತ್ತಿದೆ ಎಂದು ಮೂರು ಬಾರಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿರುವ ಚೌಹಾಣ್ ಹೇಳಿದ್ದಾರೆ. 
 
ಪ್ರಧಾನಿ ಮೋದಿ ಅವರು ವೈಯಕ್ತಿಕವಾಗಿ ಭ್ರಷ್ಟಾಚಾರ ಎಸಗಿರುವ ಬಗ್ಗೆ ನನ್ನ ಬಳಿ ವಿವರವಾದ ಮಾಹಿತಿ ಇದೆ ಎಂದು ರಾಹುಲ್ ಗಾಂಧಿ ನಿನ್ನೆ ಹೇಳಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ