ಟಿಟಿಡಿ ಸಿಇಓ ಆಗಿ ಉತ್ತರಭಾರತದ ಅಧಿಕಾರಿ ನೇಮಕ: ಪವನ್ ಕಲ್ಯಾಣ್, ಶಾರದಾ ಪೀಠದ ಶ್ರೀಗಳ ಅಸಮಾಧಾನ

ಮಂಗಳವಾರ, 9 ಮೇ 2017 (07:36 IST)
ತಿರುಪತಿಯ ತಿರುಮಲ ತಿರುಪತಿ ದೇವಸ್ಥಾನಂನ ಸಿಇಓ ಆಗಿ ಉತ್ತರಭಾರತದ ಐಎಎಸ್ ಆಧಿಕಾರಿಯ ನೇಮಕ ವಿಚಾರ ಭಾರೀ ವಿವಾದಕ್ಕೆ ಎಡೆಮಾಡಿದೆ. ಪಂಜಾಬ್ ಮೂಲದ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಸಿಂಘಲ್ ಅವರನ್ನ ಸಿಇಓ ಆಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶದ ವಿರುದ್ಧ ಸ್ವಾಮೀಜಿಗಳು ಮತ್ತು ಭಕ್ತರು ಸಿಡಿದೆದ್ದಿದ್ದಾರೆ.
 

ಟಿಟಿಡಿಯ ಸಿಇಓ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ಕೆ.ಎಸ್. ಜವಾಹರ್ ರೆಡ್ಡಿ ಹೆಸರು ಪ್ರಮುಖವಾಗಿ ಕೇಳಿಬರುತ್ತಿತ್ತು. ಅವರು ವೈಯಕ್ತಿಕ ರಜೆಯಲ್ಲಿರುವ ಕಾರಣವೊಡ್ಡಿ ಉತ್ತರ ಭಾರತದ ಐಎಎಸ್ ಅಧಿಕಾರಿಯನ್ನ ನೇಮಕ ಮಾಡಲಾಗಿದೆ ಎಂಬುದು ಆರೋಪ. ಇತಿಹಾಸದಲ್ಲೆಂದೂ ಆಂಧ್ರ ಮೂಲದ ಅಧಿಕಾರಿಯನ್ನ ಬಿಟ್ಟು ಬೇರೆಯವರನ್ನ ಸಿಇಓ ಪೋಸ್ಟ್`ಗೆ ನೇಮಕ ಮಾಡಿರಲಿಲ್ಲ.

ವಿಶಾಖಪಟ್ಟಣದ ಶಾರದಾ ಪೀಠದ ಸ್ವರೂಪಾನಂದ ಸರಸ್ವತಿ ಶ್ರೀಗಳು ಸಹ ಈ ಆಯ್ಕೆಯನ್ನ ವಿರೋಧಿಸಿದ್ದು, ಉತ್ತರಭಾರತ ಮೂಲದ ವ್ಯಕ್ತಿಗೆ ನಮ್ಮ ಆಗಮ ಶಾಸ್ತ್ರದ ಬಗ್ಗೆ ಏನು ತಿಳಿದಿರುತ್ತದೆ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಕೂಡಲೇ ನಿರ್ಧಾರ ಹಿಂಪಡೆಯದಿದ್ದರೆ ಕೋರ್ಟ್ ಮೊರೆ ಹೋಗಿಉವುದಾಗಿ ಎಚ್ಚರಿಸಿದ್ದಾರೆ.

ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಇದನ್ನ ವಿರೋಧಿಸಿದ್ದು, ಉತ್ತರಭಾರತದ ಐಎಎಸ್ ಅಧಿಕಾರಿ ನೇಮಕಕ್ಕೆ  ನನ್ನ ವಿರೋಧವಿಲ್ಲ. ಉತ್ತರ ಭಾರತದ ದೇವಸ್ಥಾನಗಳಿಗೆ ನಮ್ಮ ದಕ್ಷಿಣದ ಅಧಿಕಾರಿಗಳನ್ನ ಸಿಇಓ ಆಗಿ ನೇಮಿಸುತ್ತಾರಾ..? ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಆಂಧ್ರ ಸರ್ಕಾರ ನಿರ್ಧಾರ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

.

ವೆಬ್ದುನಿಯಾವನ್ನು ಓದಿ