ನೋಟು ರದ್ದು: ಮಾಹಿತಿ ಸೋರಿಕೆ?

ಭಾನುವಾರ, 13 ನವೆಂಬರ್ 2016 (13:11 IST)
ನವದೆಹಲಿ: ಪ್ರಧಾನಿ ಮೋದಿ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಲಿದ್ದಾರೆ ಎನ್ನುವ ಮಾಹಿತಿ ಮಾಧ್ಯಮಕ್ಕೂ ತಿಳಿದಿತ್ತು ಎನ್ನುವ ವಿಷಯ ಈಗ ಬಹಿರಂಗವಾಗಿದೆ.

ಕೇಂದ್ರ ಸರಕಾರದ ಈ ನಿರ್ಧಾರ ಕೆಲವೇ ಕೆಲವು ಮಂದಿಗೆ ಮಾತ್ರ ತಿಳಿದಿತ್ತು ಎಂದು ಕೇಂದ್ರದ ಸಚಿವರು ಹಾಗೂ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಮೋದಿ ತಮ್ಮ ನಿರ್ಧಾರ ಪ್ರಕಟಿಸುವ ಹದಿನೈದು ದಿನಗಳ ಮೊದಲೇ ಕಾನ್ಪುರ ಮೂಲದ ಪತ್ರಕರ್ತರೊಬ್ಬರು ಈ ಕುರಿತು ಸುದ್ದಿ ಮಾಡಿದ್ದರು.
 
ದೈನಿಕ್ ಜಾಗರಣ್ ಹಿಂದಿ ಸುದ್ದಿ ಪತ್ರಿಕೆಯ ಪತ್ರಕರ್ತ ಬ್ರಜೇಷ್ ದುಬೆ ಎಂಬವರು ಅಕ್ಟೋಬರ್ 27ರಂದು ನೋಟು ರದ್ದಾಗುವ ಕುರಿತು ಸುದ್ದಿ ಮಾಡಿದ್ದರು. 500 ಮತ್ತು 1000 ಮುಖ ಬೆಲೆಯ ನೋಟುಗಳನ್ನು ಕೇಂದ್ರ ಸರಕಾರ ಶೀಘ್ರವೇ ರದ್ದು ಮಾಡಲಿದ್ದು, ಅದರ ಬದಲಾಗಿ 2000 ರೂ. ನೋಟುಗಳನ್ನು ಚಲಾವಣೆಗೆ ತರಲಿದೆ. ಜೊತೆಗೆ ಹೊಸದಾಗಿ ಮುದ್ರಿಸಿದ 500 ರೂ.ಗಳನ್ನು ಚಲಾವಣೆಗೆ ತರಲಿದೆ ಎಂದು ದುಬೆ ಸುದ್ದಿ ಮಾಡಿದ್ದರು. ಈ ಕುರಿತು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ