ಇದೀಗ, ಮದ್ಯ ಖರೀದಿಸಲು ಆಧಾರ ಕಾರ್ಡ್ ಬೇಕಂತೆ...!

ಗುರುವಾರ, 21 ಸೆಪ್ಟಂಬರ್ 2017 (15:31 IST)
ಮುಂದಿನ ಬಾರಿ ನೀವು ಹೈದರಾಬಾದ್‌ನಲ್ಲಿರುವ ಪಬ್‌ಗೆ ಹೋದಲ್ಲಿ ನಿಮ್ಮ ಆಧಾರ್ ಕಾರ್ಡ್ ಪ್ರದರ್ಶಿಸಲು ಸಿದ್ಧರಾಗುವಂತಹ ಪರಿಸ್ಥಿತಿ ಎದುರಾಗಿದೆ.
ಮಾಧ್ಯಮಗಳ ವರದಿಯ ಪ್ರಕಾರ, ತೆಲಂಗಾಣ ಸರಕಾರ, ಅಬಕಾರಿ ಇಲಾಖೆಗೆ ನೋಟಿಸ್ ನೀಡಿ, ಪಬ್‌ಗೆ ಹೋಗುವವರು ಗುರುತಿನ ಪತ್ರ ತೋರಿಸಬೇಕಾಗುತ್ತದೆ. ಅದರಲ್ಲೂ ಆಧಾರ ಕಾರ್ಡ್ ಕಡ್ಡಾಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ.
 
ನಗರದಾದ್ಯಂತವಿರುವ ಪಬ್‌ ಮಾಲೀಕರು, ತಮ್ಮ ಗ್ರಾಹಕರು ವಯಸ್ಸನ್ನು ಪ್ರಾಮಾಣಿಕರಿಸುವ ಆಧಾರ ಕಾರ್ಡ್ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. 21 ವರ್ಷ ವಯಸ್ಸಿನ ಕೆಳಗಿರುವವರಿಗೆ ಪಬ್ ಪ್ರವೇಶಿಸಲು ಅನುಮತಿ ನೀಡಬಾರದು ಎಂದು ಕೋರಿದೆ. 
 
ನಗರದ ಹೋಟೆಲ್‌ನಲ್ಲಿ 17 ವರ್ಷ ವಯಸ್ಸಿನ ಬಾಲಕಿ ಮತ್ತು ಆಕೆಯೊಂದಿಗಿದ್ದ ಇತರ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡಲಾಗಿದೆ. ನಂತರ ಬಾಲಕಿಯನ್ನು ಹತ್ಯೆ ಮಾಡಲಾಗಿದೆ ಎನ್ನುವ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. 
 
ಹೆಚ್ಚುವರಿಯಾಗಿ, ತಮ್ಮ ಗ್ರಾಹಕರ ವಿವರಗಳನ್ನು ಪ್ರತ್ಯೇಕವಾಗಿ ನೋಂದಾಯಿಸುವಂತೆ ಪಬ್ ಮತ್ತು ಬಾರ್ ಮ್ಯಾನೇಜರ್‌ಗಳಿಗೆ ಸರ್ಕಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ