ಧರ್ಮಸ್ಥಳದಲ್ಲಿ ವಿರಾಮದ ಬಳಿಕ ಇಂದು ಹೇಗಿರಲಿದೆ ಆಪರೇಷನ್ ಅಸ್ಥಿಪಂಜರ

Krishnaveni K

ಸೋಮವಾರ, 4 ಆಗಸ್ಟ್ 2025 (09:14 IST)
ಮಂಗಳೂರು: ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಅವಶೇಷಗಳಿಗಾಗಿ ಹುಡುಕಾಟ ನಡೆಸುತ್ತಿರುವ ಎಸ್ಐಟಿ ತಂಡ ಇಂದು ಭಾನುವಾರದ ವಿರಾಮದ ಬಳಿಕ ಮತ್ತೆ ಫೀಲ್ಡಿಗಿಳಿಯಲಿದೆ. ಇಂದಿನ ಕಾರ್ಯಾಚರಣೆ ಹೇಗಿರಲಿದೆ ಇಲ್ಲಿದೆ ವಿವರ.

ಅನಾಮಿಕ ದೂರುದಾರ ಗುರುತು ಮಾಡಿರುವ 9 ಪಾಯಿಂಟ್ ಗಳಲ್ಲಿ ಈಗಾಗಲೇ ಹುಡುಕಾಟ ನಡೆಸಲಾಗಿದೆ. ಈ ಪೈಕಿ 6 ನೇ ಪಾಯಿಂಟ್ ನಲ್ಲಿ ಮಾತ್ರ ಅಸ್ಥಿಪಂಜರ ಸಿಕ್ಕಿದೆ. 9 ನೇ ಪಾಯಿಂಟ್ ನಲ್ಲಿ ಆರರಿಂದ ಏಳು ಶವ ಹೂತಿದ್ದಾಗಿ ಅನಾಮಿಕ ದೂರುದಾರ ಹೇಳಿದ್ದ. ಆದರೆ ಶನಿವಾರ ಅಗೆತ ಕಾರ್ಯ ನಡೆಸಿದಾಗ ಒಂದೇ ಒಂದು ಮೂಳೆ ಸಿಕ್ಕಿರಲಿಲ್ಲ.

ಇಂದು ಮತ್ತೆ ಈ ಸ್ಥಳದಲ್ಲಿ ಕಾರ್ಯಾಚರಣೆ ನಡೆಯಲಿದೆ. ಅನಾಮಿಕ ದೂರುದಾರ ಒಟ್ಟು 13 ಸ್ಥಳಗಳನ್ನು ಗುರುತು ಮಾಡಿದ್ದ. ಇನ್ನೂ ನಾಲ್ಕು ಸ್ಥಳಗಳಲ್ಲಿ ಮಣ್ಣು ಅಗೆದು ಅವಶೇಷಗಳಿಗಾಗಿ ಹುಡುಕಾಟ ನಡೆಸುವ ಪ್ರಕ್ರಿಯೆ ಬಾಕಿಯಿದೆ. ಹೀಗಾಗಿ ಇಂದು 9 ಮತ್ತು 10 ರಲ್ಲಿ ಹುಡುಕಾಟ ನಡೆಯುವ ಸಾಧ್ಯತೆಯಿದೆ.

9 ನೇ ಪಾಯಿಂಟ್ ಬಗ್ಗೆ ದೂರುದಾರರು ವಿಶೇಷವಾಗಿ ಉಲ್ಲೇಖಿಸಿದ್ದರು. ಈ ಸ್ಥಳದಲ್ಲಿ ಮೂಳೆ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ಮೊನ್ನೆ ಸಿಕ್ಕಿರಲಿಲ್ಲ. ಹೀಗಾಗಿ ದೂರುದಾರರ ಪರ ವಕೀಲರು ಗ್ರೌಂಡ್ ಪೆನಟ್ರೀಟಿಂಗ್ ರಾಡರ್ ಬಳಸಿ ಶೋಧ ಕಾರ್ಯ ನಡೆಸಲು ಮನವಿ ಮಾಡಿದ್ದಾರೆ. ಇದನ್ನು ಎಸ್ಐಟಿ ತಂಡ ಪುರಸ್ಕರಿಸುತ್ತಾ ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ