ಉತ್ತರ ಪ್ರದೇಶದಲ್ಲಿ ಇನ್ನು ಜೀನ್ಸ್ ಪ್ಯಾಂಟ್ ಗೂ ನಿಷೇಧ!

ಗುರುವಾರ, 6 ಏಪ್ರಿಲ್ 2017 (09:03 IST)
ಲಕ್ನೋ: ಸಿಎಂ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸಿಕೊಂಡಾಗಿನಿಂದ ಉತ್ತರ ಪ್ರದೇಶದಲ್ಲಿ ಮದ್ಯ, ಮಾಂಸ, ಪಾನ್ ಪ್ರಿಯರಿಗೆ ಸಂಕಟ ಶುರುವಾಗಿದೆ. ಇದೀಗ ಯೋಗಿ ಕಣ್ಣು ಜೀನ್ಸ್ ತೊಡುವವರ ಮೇಲೆ ಬಿದ್ದಿದೆ.

 

ಇನ್ನು ಮುಂದೆ, ಕಾಲೇಜು ಮತ್ತು ಶಾಲೆಗಳಲ್ಲಿ ಕೆಲಸ ಮಾಡುವವರು, ಬಿಗಿಯಾದ ಜೀನ್ಸ್ ಪ್ಯಾಂಟ್ ಮತ್ತು ಟಿ-ಶರ್ಟ್ ಹಾಕಿಕೊಂಡು ಬರುವಂತಿಲ್ಲ ಎಂದು ಸಿಎಂ ಆದೇಶಿಸಿದ್ದಾರೆ. ಜೀನ್ಸ್ ಮಾತ್ರವಲ್ಲ, ಮೈ ತೋರಿಸುವ ಅಶ್ಲೀಲ ಬಟ್ಟೆ ತೊಡಬಾರದು. ಅದರ ಬದಲು ಸಡಿಲ ಸರಳ ಉಡುಪು ತೊಟ್ಟು ಕಚೇರಿಗೆ ಬರಬೇಕು ಎಂದು ಆದೇಶಿಸಿದ್ದಾರೆ.

 
ಇತ್ತೀಚೆಗಷ್ಟೇ ಅನಧಿಕೃತ ಮಾಂಸ ಮಾರಾಟಗಾರರಿಗೆ ನಿಷೇಧ ಹೇರಿದ್ದ ಸಿಎಂ ಯೋಗಿ, ಇದೀಗ ಶಾಲೆ, ಕಾಲೇಜು, ದೇವಸ್ಥಾನಗಳ ಪಕ್ಕದಲ್ಲಿ ಮದ್ಯ, ತಂಬಾಕು ಮಾರಾಟವನ್ನೂ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ