ಬಯಲು ಮಲವಿಸರ್ಜನೆ ಮಾಡುವವರ ಜತೆ ಸೆಲ್ಫಿ ಕ್ಲಿಕ್ಕಿಸಿ, ಬಹುಮಾನ ಗೆಲ್ಲಿ
ಬುಧವಾರ, 28 ಡಿಸೆಂಬರ್ 2016 (15:47 IST)
ಬಯಲು ಮಲವಿಸರ್ಜನೆಗೆ ಕಡಿವಾಣ ಹಾಕಿ ಸ್ವಚ್ಛ ಭಾರತ ಆಂದೋಲನವನ್ನು ಸಾಕಾರಗೊಳಿಸಲು ಮಹಾರಾಷ್ಟ್ರದ ಪಂಚಾಯತ್ ಒಂದು ವಿನೂತನ ಆಂದೋಲನವನ್ನು ಆರಂಭಿಸಿದೆ.
ಬಯಲು ಮಲವಿಸರ್ಜನೆ ಮಾಡುತ್ತಿರುವವರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವವರಿಗೆ ಬುಲ್ದಾನಾ ಜಿಲ್ಲೆಯ ಚಂದೋಲ್ ಪಂಚಾಯತ್ 500 ರೂಪಾಯಿ ನಗದು ಬಹುಮಾನವನ್ನು ಘೋಷಿಸಲಿದೆ, ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.
ಪ್ರಧಾನಿ ಅವರ ಮಹಾತ್ವಾಕಾಂಕ್ಷೆಯ 'ಸ್ವಚ್ಛ ಭಾರತ್' ಯೋಜನೆ ಸಾಕಾರಕ್ಕೆ ನಮ್ಮಿಂದಾದ ಕೊಡುಗೆ ನೀಡಲು ತಾವು ಈ ಹೊಸ ಪ್ರಯೋಗವನ್ನು ಮಾಡಲಿದ್ದೇವೆ. ಏಪ್ರಿಲ್ 2017ರಿಂದ ಈ ನಿರ್ಧಾರ ಅನುಷ್ಠಾನಗೊಳ್ಳಲಿದೆ ಎಂದು ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.
ಬಯಲು ಮಲವಿಸರ್ಜನೆ ಮಾಡುವವರಿಗೆ ಮುಜುಗರವನ್ನುಂಟು ಮಾಡುವುದು ಈ ನಡೆಯ ಉದ್ದೇಶ. ಈ ಪ್ರಯೋಗಕ್ಕೆ ಹೆದರಿಯಾದರೂ ಜನರು ಬಯಲು ಬಹಿರ್ದೆಸೆಯನ್ನು ನಿಲ್ಲಿಸುತ್ತಾರೆಂಬುದು ನಮ್ಮ ಆಶಯ ಎಂದು ಸ್ಥಳೀಯರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.