ನರ್ಸರಿ ವಿದ್ಯಾರ್ಥಿನಿ ಮೇಲೆ ಸ್ಕೂಲ್ ಬಸ್ ನಲ್ಲೇ ಅತ್ಯಾಚಾರ

ಬುಧವಾರ, 14 ಸೆಪ್ಟಂಬರ್ 2022 (08:20 IST)
ಭೋಪಾಲ್: ನರ್ಸರಿ ಓದುತ್ತಿರುವ ಮೂರೂವರೆ ವರ್ಷದ ಹೆಣ‍್ಣು ಮಗುವಿನ ಮೇಲೆ ಶಾಲಾ ಬಸ್ ನಲ್ಲೇ ಡ್ರೈವರ್ ಅತ್ಯಾಚಾರವೆಸಗಿರುವ ಹೇಯ ಘಟನೆ ನಡೆದಿದೆ.

ಇದಕ್ಕೆ ಸಹಾಯಕಿಯೂ ನೆರವಾಗಿರುವುದು ವಿಪರ್ಯಾಸ. ಇದೀಗ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಗೆ ಬಂದಾಗ ಮಗುವಿನ ಮೈ ಮೇಲೆ ಗಾಯಗಳಿರುವುದನ್ನು ನೋಡಿ ತಾಯಿ ಪ್ರಶ್ನಿಸಿದಾಗ ಕೃತ್ಯ ಬಯಲಿಗೆ ಬಂದಿದೆ. ತಕ್ಷಣವೇ ಪೋಷಕರು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಆದರೆ ಶಾಲೆಯವರು ಆರೋಪ ನಿರಾಕರಿಸಿದ್ದಾರೆ. ಬಳಿಕ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ