ನಿಷೇಧಿತ 500 ರೂ ನೋಟಿನಿಂದ ವಿದ್ಯುತ್ ಉತ್ಪಾದನೆ

ಸೋಮವಾರ, 22 ಮೇ 2017 (15:48 IST)
ನಿಷೇಧಗೊಂಡಿರುವ 500 ರೂ ಹಳೆ ನೋಟಿನಿಂದ ಒಡಿಶಾದ 17 ವರ್ಷದ ವಿದ್ಯಾರ್ಥಿಯೊಬ್ಬ ವಿದ್ಯುತ್ ತಯಾರಿಸಿ ಗಮನ ಸೆಳೆದಿದ್ದಾನೆ.
 
ಒಡಿಶಾದ ನೌಪದ ನಿವಾಸಿ, ಖರಿಯರ್ ಕಾಲೇಜಿನ ಸೈನ್ಸ್ ವಿದ್ಯಾರ್ಥಿಯಾಗಿರುವ ಲಕ್ಮನ್ ರದ್ದುಗೊಂಡಿರುವ 500ರ ಒಂದು ನೋಟಿನಿಂದ 5 ವೋಲ್ಟ್ ವಿದ್ಯುತ್ ಉತ್ಪಾದಿಸುವುದಾಗಿ ಹೇಳಿದ್ದು, ಈ ಪ್ರಾಜೆಕ್ಟ್ ಬಗ್ಗೆ ವರದಿ ಸಲ್ಲಿಸಲು ಪ್ರಧಾನಿ ಕಾರ್ಯಾಲಯವು ಒಡಾಶಾದ ವಿಜ್ನಾನ ಮತ್ತು ತಂತ್ರಜ್ನಾನ ಇಲಾಖೆಗೆ ಸೂಚಿಸಿದೆ.
 
ನೋಟ್ ಗೆ ಸಿಲಿಕಾನ್ ಕೋಟ್ ಮಾಡಿ, ಅದನ್ನು ನೇರವಾಗಿ ಸೂರ್ಯನ ಬೆಳಕಿಗೆ ತೆರೆದಿಟ್ಟು ಸಿಲಿಕಾನ್ ಪ್ಲೇಟ್ ಅನ್ನು ವೈರ್ ಮೂಲಕ ಟ್ರಾನ್ಸ್ ಫಾರ್ಮರ್ ಗೆ ಸಂಪರ್ಕ ಕಲ್ಪಿಸಿ ವಿದ್ಯುತ್ ಉತ್ಪಾದಿಸುವುದಾಗಿ ಲಕ್ಮನ್ ವಿವರಿಸಿದ್ದಾನೆ.
 
ಈ ಪ್ರಯೋಗದಲ್ಲಿ ತಾನು ಕೇವಲ 15 ದಿನಗಳಲ್ಲಿ ಯಶಸ್ಸುಕಂಡಿರುವುದಾಗಿ ವಿದ್ಯಾರ್ಥಿ ವಿವರಿಸಿದ್ದಾನೆ. ನಿಷೇಧಿತ ನೋಟುಗಳನ್ನು ಹೇಗೆ ಬಳಕೆಮಾಡಿಕೊಳ್ಳಬೇಕೆಂಬ ಚಿಂತನೆಯಲ್ಲಿರುವಾಗ ಲಕ್ಮನ್ ಗೆ ಈ ಯೋಜನೆ ಬೆಳಕಿಗೆ ಬಂದಿರುವುದಾಗಿ ತಿಳಿಸುತ್ತಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ