ಸಿಗರೇಟ್ ಸೇದಲು ತಾತನ ಒತ್ತಾಯ: ವಿಡಿಯೋ ವೈರಲ್

ಶುಕ್ರವಾರ, 3 ಜೂನ್ 2022 (08:40 IST)
ಲಕ್ನೋ: ತನ್ನ ಮೊಮ್ಮಗಳಿಗೆ ವೃದ್ಧನೊಬ್ಬ ಸಿಗರೇಟು ಸೇದಲು ಒತ್ತಾಯಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಅಪ್ರಾಪ್ತ ವಯಸ್ಸಿನ ಮೊಮ್ಮಗಳಿಗೆ ಬಲವಂತವಾಗಿ ತಾತ ಸಿಗರೇಟು ಸೇದಲು ಹೇಳುತ್ತಾನೆ. ಈ ಬಗ್ಗೆ ಮಕ್ಕಳ ರಕ್ಷಣಾ ಆಯೋಗ ಸಂತ್ರಸ್ತೆಯ ಮನೆಗೆ ತೆರಳಿ ಲಿಖಿತ ದೂರು ಪಡೆದುಕೊಂಡಿದೆ. ಬಳಿಕ ಪೊಲೀಸರಿಗೆ ಪ್ರಕರಣ ವರ್ಗಾಯಿಸಿದೆ.

ಈ ವೇಳೆ ಸಂತ್ರಸ್ತ ಬಾಲಕಿಯ ತಾಯಿ ಪೊಲೀಸರ ಮುಂದೆ ತನ್ನ ಮಗಳ ಮೇಲಾಗುತ್ತಿದ್ದ ದೌರ್ಜನ್ಯದ ಬಗ್ಗೆ ದೂರಿದ್ದಾಳೆ. ತಾನು ಎಷ್ಟೇ ಬೇಡಿಕೊಂಡರೂ ತಾತ ಕಿವಿಗೊಡದೇ ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂದಿದ್ದಾಳೆ. ಇದೀಗ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ