ಟಾಪ್ ಲೆಸ್ ಮಾಡೆಲ್`ಗೆ ಯೋಗ ಕಲಿಸಿದ ಓಂ ಸ್ವಾಮಿ

ಶುಕ್ರವಾರ, 12 ಮೇ 2017 (17:48 IST)
ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ಬಿಗ್ ಬಾಸ್ ಸೀಸನ್-10ರ ಸ್ಪರ್ಧಿ ಓಂ ಸ್ವಾಮಿ ಅರೆಬೆತ್ತಲೆ ಮಾಡೆಲ್ ಜೊತೆ ಯೋಗ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಧ್ಯಾನ ಮಾಡುತ್ತಿದ್ದ ಓಂಸ್ವಾಮಿಯನ್ನ ಸೆಳೆಯುವ ರೀತಿ ಮಾಡೆಲ್ ಲ್ಯಾಪ್ ಡ್ಯಾನ್ಸ್ ಮಾಡಿದ ವಿಡಿಯೋ ಬಹಿರಂಗಗೊಂಡ 24 ಗಂಟೆಗಳಲ್ಲಿ ಮತ್ತೊಂದು ವಿವಾದಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟಾಪ್ ಲೆಸ್ ಮಾಡೆಲ್ ಜೊತೆ ಕುಳಿತಿದ್ದ ಓಂಸ್ವಾಮಿ ಯೋಗ ಹೇಳಿಕೊಡುತ್ತಿರುವ ದೃಶ್ಯಾವಳಿ ಈ ವಿಡಿಯೋದಲ್ಲಿದೆ. ಈ ಹಿಂದೆ ಸಲ್ಮಾನ್ ಖಾನ್ ವಿರುದ್ಧವೇ ಇಲ್ಲಸಲ್ಲದ ಕಾಮೆಂಟ್ ಮಾಡಿ ಸುದ್ದಿಯಾಗಿದ್ದ ಓಂಸ್ವಾಮಿ ಈಗ ಮಾಡೆಲ್`ಗಳ ಜೊತೆ ಸುದ್ದಿಯಾಗುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ