Mangaluru Suhas Shetty murder: ಸುಹಾಸ್ ಶೆಟ್ಟಿ ಹತ್ಯೆ ಆರೋಪಿಗಳು ಅರೆಸ್ಟ್: ಓರ್ವ ಹಿಂದೂ ವ್ಯಕ್ತಿಯಿಂದಲೇ ಆರೋಪಿಗಳಿಗೆ ಸಹಾಯ
ಮೊನ್ನೆ ರಾತ್ರಿ ಸುಹಾಸ್ ಶೆಟ್ಟಿಯನ್ನು ಬಜ್ಪೆಯಲ್ಲಿ ನಡು ರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಘಟನೆ ಬಳಿಕ ಆರೋಪಿಗಳು ಸ್ವಿಫ್ಟ್ ಕಾರಿನಲ್ಲಿ ಆರಾಮವಾಗಿ ಎಸ್ಕೇಪ್ ಆಗಿದ್ದರು. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದೀಗ ಸುಹಾಸ್ ಶೆಟ್ಟಿ ಕೊಲೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು ಎಂಟು ಶಂಕಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರದಲ್ಲಿ ಪ್ರಮುಖ ಆರೋಪಿಗಳು ಮುಸ್ಲಿಂ ಧರ್ಮೀಯರೆನ್ನಲಾಗಿದ್ದು ಇವರಿಗೆ ಬಜರಂಗ ದಳದ ಮಾಜಿ ಸದಸ್ಯನೊಬ್ಬನೂ ಸಹಾಯ ಮಾಡಿದ್ದ ಎನ್ನಲಾಗಿದ್ದು ಆತನನ್ನೂ ಬಂಧಿಸಲಾಗಿದೆ.
ನಿನ್ನೆ ಸಂಜೆ ಸುಹಾಸ್ ಶೆಟ್ಟಿ ಅಂತಿಮ ಕ್ರಿಯೆಗಳು ನೆರವೇರಿದೆ. ಈ ವೇಳೆ ಸಾಕಷ್ಟು ಜನ ಸೇರಿದ್ದರು. ನಿನ್ನೆ ದಕ್ಷಿಣ ಕನ್ನಡ ಬಂದ್ ಘೋಷಿಸಲಾಗಿತ್ತು. ಇದೀಗ ಮುನ್ನೆಚ್ಚರಿಕೆ ಕ್ರಮವಾಗಿ ಮೇ 5 ರವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದೆ.