ಭಾರತಕ್ಕೆ ಕಂಟಕವಾಗುವುದೇ ಓಮಿಕ್ರಾನ್!?

ಶುಕ್ರವಾರ, 3 ಡಿಸೆಂಬರ್ 2021 (11:02 IST)
ನವದೆಹಲಿ : ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಇದೀಗ ಭಾರತಕ್ಕೆ ಕಂಟಕವಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.
ಈಗಾಗಲೇ ದೇಶದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ. ಈ ನಡುವೆ ಕಳೆದ ನಾಲ್ಕು ದಿನಗಳಿಂದ ಭಾರತಕ್ಕೆ ಹೈರಿಸ್ಕ್ ದೇಶಗಳಿಂದ 7,976 ಮಂದಿ ಬಂದಿಳಿದಿದ್ದು, ಈ ಪೈಕಿ 12 ಮಂದಿಯಲ್ಲಿ ಕೊರೊನಾ ಕಂಡುಬಂದು ಆತಂಕ ಮೂಡಿಸಿದೆ.
ಮಹಾರಾಷ್ಟ್ರ, ದೆಹಲಿ ಮತ್ತು ಉತ್ತರ ಪ್ರದೇಶದ ತಲಾ ನಾಲ್ವರಲ್ಲಿ ಸೋಂಕು ಕಂಡು ಬಂದಿದೆ. ಇವರ ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಫಲಿತಾಂಶ ಬರಬೇಕಿದೆ. ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್ 24ರಂದು ಬೆಳಕಿಗೆ ಬಂದ ಓಮಿಕ್ರಾನ್ ತಳಿಯ ವೈರಾಣು ಕೇವಲ 8 ದಿನಗಳ ಅಂತರದಲ್ಲಿ ಬರೋಬ್ಬರಿ 29 ದೇಶಗಳಿಗೆ ವ್ಯಾಪಿಸಿದೆ.
ಜಗತ್ತಿನಾದ್ಯಂತ ಒಟ್ಟು 373 ಮಂದಿಗೆ ಓಮಿಕ್ರಾನ್ ಸೋಂಕು ತಗುಲಿದೆ. ದಕ್ಷಿಣ ಆಫ್ರಿಕಾದಲ್ಲಿ ಅತ್ಯಧಿಕ ಅಂದರೆ 183 ಪ್ರಕರಣ ಪತ್ತೆಯಾಗಿದೆ. ಘನಾದಲ್ಲಿ 33, ಬ್ರಿಟನ್ನಲ್ಲಿ 32, ಬೋಟ್ಸ್ ವಾನದಲ್ಲಿ 19, ನೆದರ್ಲೆಂಡ್ನಲ್ಲಿ 16, ಪೋರ್ಚುಗಲ್ನಲ್ಲಿ 13, ಜರ್ಮನಿಯಲ್ಲಿ 10, ಆಸ್ಟ್ರೇಲಿಯಾದಲ್ಲಿ 8, ಹಾಂಕಾಂಗ್, ಕೆನಡಾದಲ್ಲಿ ತಲಾ 7, ಡೆನ್ಮಾರ್ಕ್ನಲ್ಲಿ 6, ಇಟಲಿ, ಸ್ವೀಡೆನ್ನಲ್ಲಿ ತಲಾ 4, ದಕ್ಷಿಣ ಕೊರಿಯಾದಲ್ಲಿ 3, ಭಾರತ, ಇಸ್ರೇಲ್, ಬೆಲ್ಜಿಯಂ, ಸ್ಪೇನ್, ಬ್ರೆಜಿಲ್, ನಾರ್ವೇಯಲ್ಲಿ ತಲಾ 2, ಅಮೆರಿಕಾ, ಫ್ರಾನ್ಸ್, ಸೌದಿ ಅರೇಬಿಯಾ, ಐರ್ಲೆಂಡ್, ಯುಎಇಯಲ್ಲಿ ತಲಾ 1 ಪ್ರಕರಣ ಬೆಳಕಿಗೆ ಬಂದಿವೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ