ಪಂದ್ಯಾರಂಭಕ್ಕೂ ಮೊದಲು ಟೀಂ ಇಂಡಿಯಾದ ಬಿಗ್ ಪ್ಲೇಯರ್ಸ್ ಗೆ ಗಾಯ!
ರವೀಂದ್ರ ಜಡೇಜಾ, ಅಜಿಂಕ್ಯಾ ರೆಹಾನೆ ಮತ್ತು ಇಶಾಂತ್ ಶರ್ಮಾಗೆ ಗಾಯವಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ಹೀಗಾಗಿ ಟೀಂ ಇಂಡಿಯಾಗೆ ಆಡುವ ಬಳಗವನ್ನು ಆಯ್ಕೆ ಮಾಡುವ ದೊಡ್ಡ ತಲೆನೋವು ಮರೆಯಾಗಿದೆ. ಇಶಾಂತ್ ಹಾಗೂ ರೆಹಾನೆ ಮೊದಲ ಟೆಸ್ಟ್ ನಲ್ಲೂ ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಆಡುವುದು ಅನುಮಾನವಾಗಿತ್ತು. ಆದರೆ ಜಡೇಜಾ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಟೀಂ ಇಂಡಿಯಾಗೆ ಅವರ ಅನುಪಸ್ಥಿತಿ ಕಾಡಲಿದೆ.