ಭಾರತ-ನ್ಯೂಜಿಲೆಂಡ್ ದ್ವಿತೀಯ ಟೆಸ್ಟ್ ಇಂದಿನಿಂದ
ಮೊದಲ ಪಂದ್ಯವನ್ನು ಹರಸಾಹಸಪಟ್ಟು ಡ್ರಾ ಮಾಡಿಕೊಂಡಿದ್ದ ನ್ಯೂಜಿಲೆಂಡ್ ಹೊಸ ಹುಮ್ಮಸ್ಸಿನಲ್ಲಿದೆ. ಅಲ್ಲದೆ, ಮುಂಬೈನಲ್ಲಿ ವೇಗಿಗಳಿಗೆ ನೆರವು ನೀಡುವ ಪಿಚ್ ತಯಾರಿಸಲಾಗಿದೆ ಎನ್ನಲಾಗಿದೆ.
ಇನ್ನು, ಭಾರತಕ್ಕೆ ನಾಯಕ ಕೊಹ್ಲಿ ಪುನರಾಗಮನ ಪ್ಲಸ್ ಪಾಯಿಂಟ್. ಅಲ್ಲದೆ, ಮುಂಬೈನಲ್ಲಿ ಇದಕ್ಕೂ ಮೊದಲು ಆಡಿದ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾಗೆ ಈ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕವಿದೆ. ಬೆಳಿಗ್ಗೆ 9.30 ರಿಂದ ಪಂದ್ಯ ಆರಂಭವಾಗಲಿದೆ.