ಕೇರಳೀಯರಿಗೆ ಇಂದು ಓಣಂ ಸಂಭ್ರಮ: ಪೂಕಳಂ ಗ್ಯಾಲರಿ ಇಲ್ಲಿದೆ ನೋಡಿ

ಗುರುವಾರ, 8 ಸೆಪ್ಟಂಬರ್ 2022 (11:08 IST)
ಬೆಂಗಳೂರು: ಕೇರಳೀಯರ ನಾಡಹಬ್ಬ ಓಣಂ ಆಚರಣೆಯಲ್ಲಿ ಪೂಕಳಂ (ಹೂವಿನ ರಂಗೋಲಿ) ಇಡುವುದೂ ಒಂದು. ಮನೆ ಮನೆಗಳಲ್ಲಿ ತಮ್ಮ ನೆಚ್ಚಿನ ರಾಜ ಮಹಾಬಲಿಯನ್ನು ಎದಿರುಗೊಳ್ಳಲು ಕೇರಳೀಯರು ಇಂದು ಹೂವಿನಿಂದ ಸುಂದರ ರಂಗೋಲಿ ರಚಿಸಿ ಸಂಭ್ರಮಿಸುತ್ತಾರೆ.

ಹೂವಿನ ರಂಗೋಲಿಗೆ ಮುಖ್ಯವಾಗಿ ಬೇಕಾಗುವುದು ತುಂಬೆ ಹೂವು. ಅದಲ್ಲದೆ, ಸ್ಥಳೀಯವಾಗಿ ಸಿಗುವ ವಿವಿಧ ಬಣ್ಣದ ಹೂವು, ಎಲೆಗಳನ್ನು ಬಳಸಿ ಹೂವಿನಿಂದಲೇ ರಂಗೋಲಿ ತಯಾರಿಸುವುದಕ್ಕೆ ಪೂಕಳಂ ಎನ್ನುತ್ತಾರೆ. ಕೆಲವೊಂದು ಸುಂದರ ಪೂಕಳಂ ಫೋಟೋ ಇಲ್ಲಿದೆ ನೋಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ