ಗೋವಾದಲ್ಲಿ ಆಪರೇಷನ್ ಕಮಲ ಸದ್ದು

ಮಂಗಳವಾರ, 12 ಜುಲೈ 2022 (07:40 IST)
ಪಣಜಿ : ಮಹಾರಾಷ್ಟ್ರದ ಬಳಿಕ ಇದೀಗ ಗೋವಾದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದೆ.
 
ಆಪರೇಷನ್ ಕಮಲದ ಭೀತಿಯ ಹಿನ್ನೆಲೆಯಲ್ಲಿ ಉಪ ಸಭಾಪತಿ ಹುದ್ದೆ ಚುನಾವಣೆಯ ಅಧಿಸೂಚನೆಯನ್ನೂ ರದ್ದುಗೊಳಿಸಲಾಗಿದೆ.

40 ಸದಸ್ಯರ ಸದನದಲ್ಲಿ ಕಾಂಗ್ರೆಸ್ನ 11, ಬಿಜೆಪಿ 20, ಎಂಜಿಪಿ 2 ಹಾಗೂ ಮೂವರು ಪಕ್ಷೇತರ ಶಾಸಕರು ಇದ್ದಾರೆ. ಕಾಂಗ್ರೆಸ್ನ ಹಲವು ಶಾಸಕರನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದ್ದು, ಇದು ಮುಂದಿನ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸುಗಮ ದಾರಿ ಮಾಡಿಕೊಡುತ್ತದೆ ಎಂಬುದು ಬಿಜೆಪಿಯ ಗೇಮ್ಪ್ಲಾನ್ ಎಂದು ಹೇಳಲಾಗಿದೆ. 

ಇದೀಗ 11 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ ಪಕ್ಷದಿಂದ ದಿಂಗಬರ್ ಕಾಮತ್ ಹಾಗೂ ಮೈಕೆಲ್ ಲೋಬೋ ಅವರನ್ನು ಪಕ್ಷಾಂತರ ವಿರೋಧಿ ಕಾಯ್ದೆ ಅಡಿಯಲ್ಲಿ ಅನರ್ಹಗೊಳಿಸಬೇಕು ಅಂದುಕೊಂಡಿದೆ. ವಿಧಾನಸಭೆಯ ಸಭಾಪತಿಗೂ ಮನವಿ ಸಲ್ಲಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ