ನವದೆಹಲಿ: ಪಾಕಿಸ್ತಾನ ಪೋಷಿತ ಉಗ್ರರ ನೆಲೆಗಳ ಮೇಲೆ ಭಾರತ ಸೇನೆಯು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕಳೆದ ರಾತ್ರಿ ದಾಳಿ ನಡೆಸಿದೆ. ಸೇನಾ ಕಾರ್ಯಾಚರಣೆ ಯಶಸ್ವಿಯಾದ ಬೆನ್ನಲ್ಲೆ ಕೇಂದ್ರ ಸರ್ಕಾರವು ಮೇ 8 ರಂದು ಬೆಳಿಗ್ಗೆ 11 ಕ್ಕೆ ಸರ್ವ ಪಕ್ಷಗಳ ಸಭೆಯನ್ನು ಕರೆಯಲಾಗಿದೆ.
ಕಳೆದ ರಾತ್ರಿ ವಾಯುಸೇನೆಯ ಮುಂದಾಳತ್ವದಲ್ಲಿ ಆಪರೇಷನ್ ಸಿಂಧೂರ್ ಕೈಗೊಂಡು ಒಂಬತ್ತು ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ. ಆಪರೇಷನ್ ಯಶಸ್ವಿಯಾದ ಬಳಿಕ ಸರ್ವ ಪಕ್ಷಗಳ ಸಭೆಯನ್ನು ಕಡೆಯಲಾಗಿದೆ.
ಎರಡು ವಾರದ ಹಿಂದೆ ಪೆಹಲ್ಗಾಮ್ ದಾಳಿ ಬೆನ್ನಲ್ಲೇ ಸರ್ವ ಪಕ್ಷಗಳ ಸಭೆ ನಡೆಸಿತ್ತು. ಆ ಸಭೆಯಲ್ಲಿ ಎಲ್ಲಾ ಪಕ್ಷಗಳು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ಘೋಷಣೆ ಮಾಡಿದ್ದವು. ಇದೀಗ ಮತ್ತೆ ಸರ್ವ ಪಕ್ಷದ ಸಭೆ ಕರೆಯಲಾಗಿದೆ.
ಈ ಬಾರಿಯ ಸರ್ವಪಕ್ಷಗಳ ಸಭೆಯಲ್ಲಿ ಅಧ್ಯಕ್ಷತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಹಿಸಲಿದ್ದಾರೆ. ಗೃಹ ಸಚಿವ ಅಮಿತ್ ಶಾ, ಸಚಿವ ಕಿರಣ್ ರಿಜಿಜು ಭಾಗವಹಿಸುವರು. ಪ್ರಧಾನಿ ಮೋದಿ ಭಾಗಿಯಾಗುವ ಬಗ್ಗೆ ಖಚಿತ ಪಡಿಸಿಲ್ಲ. ಇನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ದೇಶದ ಎಲ್ಲಾ ಪಕ್ಷಗಳ ಮುಖಂಡರು ಭಾಗಿಯಾಗುವ ಸಾಧ್ಯತೆಗಳಿವೆ.
ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಹೇಗಿತ್ತು ಮತ್ತು ಮುಂದಿನ ನಿಲುವುಗಳ ಬಗ್ಗೆ ಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿವರಿಸುವ ಸಾಧ್ಯತೆ ಇದೆ. ಜತೆಗೆ ಸರ್ಕಾರಕ್ಕೆ ಮುಂದೆಯೇ ಬೆಂಬಲ ಸೂಚಿಸುವಂತೆ ಕೋರುವ ಸಾಧ್ಯತೆಗಳಿವೆ.