ಎಸ್.ಎಂ ಕೃಷ್ಣರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ

ಗುರುವಾರ, 23 ಮಾರ್ಚ್ 2023 (08:53 IST)
ನವದೆಹಲಿ : 2023ರ ಸಾಲಿನ ಪ್ರತಿಷ್ಠಿತ ಪದ್ಮಪ್ರಶಸ್ತಿ ಪ್ರದಾನ ಸಮಾರಂಭ ರಾಷ್ಟ್ರಪತಿ ಭವನದಲ್ಲಿ ನಡೀತು. ನಾಡಿನ ಹಿರಿಯ ಧುರೀಣ, 91 ವರ್ಷದ ಎಸ್ಎಂ ಕೃಷ್ಣ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿ ನೀಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸಮ್ಮಾನಿಸಿದ್ರು.

ಖ್ಯಾತ ಕಾದಂಬರಿಕಾರ ಎಸ್ಎಲ್ ಬೈರಪ್ಪ ಮತ್ತು ಇನ್ಫೋಸಿಸ್ ಫೌಂಡೇಶನ್ನ ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಪುರಸ್ಕಾರ ದೊರೆಯಿತು. ರಾಜ್ಯದ ಡಾ.ಖಾದರ್, ರಾಣಿ ಮಾಚಯ್ಯ, ನಾಡೋಜ ಮುನಿವೆಂಕಟಪ್ಪ, ಶಾ ರಶೀದ್ ಖಾದ್ರಿ, ಎಸ್ ಸುಬ್ರಮಣಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ