Pahalgam Terror Attack: ರಾಷ್ಟ್ರೀಯ ಭದ್ರತೆ ಹಿತದೃಷ್ಟಿಯಲ್ಲಿ ದೊಡ್ಡ ನಿರ್ಧಾರ ಕೈಗೊಂಡ ಕೇಂದ್ರ

Sampriya

ಶನಿವಾರ, 26 ಏಪ್ರಿಲ್ 2025 (19:50 IST)
Photo Credit X
ನವದೆಹಲಿ: ಇನ್ಮುಂದೆ ಮಾಧ್ಯಮಗಳು ರಕ್ಷಣಾ ಕಾರ್ಯಾಚೆಣೆಗಳ ನೇರ ಪ್ರಸಾರವನ್ನು ಮಾಡದಂತೆ ಕೇಂದ್ರ ಸರ್ಕಾರ ಮನವಿ ಮಾಡಿದೆ.

ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಅತಿಯಾದ ಮಾಧ್ಯಮ ಪ್ರಸಾರ ಸಂಬಂಧ ಇದೀಗ ಕೇಂದ್ರ ಈ ನಿರ್ಧಾರವನ್ನು ಕೈಗೊಂಡಿದೆ.

ಸೇನಾ ಚಲನವಲನಗಳು ಮತ್ತು ಭದ್ರತಾ ಕಾರ್ಯಾಚರಣೆಗಳ ನೇರ ದೃಶ್ಯಗಳನ್ನು ಪ್ರಸಾರ ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಎಲ್ಲ ಮಾಧ್ಯಮಗಳು, ಸುದ್ದಿ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸಲಹೆ ನೀಡಿದೆ.

ಏಪ್ರಿಲ್ 26 ರಂದು ನೀಡಿದ ಸಲಹೆಯಲ್ಲಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಲ್ಲಿ, ಎಲ್ಲಾ ಮಾಧ್ಯಮ ವೇದಿಕೆಗಳು, ಸುದ್ದಿ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸಲು ಮತ್ತು ರಕ್ಷಣೆ ಮತ್ತು ಇತರ ಭದ್ರತಾ ಸಂಬಂಧಿತ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವರದಿ ಮಾಡುವಾಗ ಅಸ್ತಿತ್ವದಲ್ಲಿರುವ ಕಾನೂನು ಮತ್ತು ನಿಬಂಧನೆಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರಲು ಸೂಚಿಸಲಾಗಿದೆ.

ರಾಷ್ಟ್ರೀಯ ಭದ್ರತೆಯ ಮೇಲಿನ ಕಳವಳಗಳನ್ನು ಉಲ್ಲೇಖಿಸಿ, ಸಲಹೆಯು ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ನಿಬಂಧನೆಗಳಿಗೆ ಕಟ್ಟುನಿಟ್ಟಾದ ಅನುಸರಣೆಯನ್ನು ಒತ್ತಿಹೇಳಿತು. ಇದು ಲೈವ್ ಕವರೇಜ್, ದೃಶ್ಯಗಳ ಪ್ರಸಾರ, ಅಥವಾ ರಕ್ಷಣಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಪ್ರಸಾರವನ್ನು ಮಾಡದಂತೆ ಹೇಳಲಾಗಿದೆ.

ಈ ರೀತಿ ಮಾಡುವುದರಿಂದ ಇದು ತನಿಖೆಗೆ ಹಾಗೂ ಕಾರ್ಯಚರಣೆಗೆ ತೊಡಕಾಗಬಹುದು. ಕಾರ್ಯಾಚರಣೆಯ ಪರಿಣಾಮಕಾರಿತ್ವ ಮತ್ತು ಸಿಬ್ಬಂದಿ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಉಲ್ಲೇಖಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ