ಪಾಕ್‌ನ ಮಾನವೀಯತೆ ತುಂಬಾನೇ ಡೇಂಜರ್‌: ಅಸಾದುದ್ದೀನ್ ಓವೈಸಿ

Sampriya

ಶನಿವಾರ, 17 ಮೇ 2025 (17:43 IST)
Photo Credit X
ಹೈದರಾಬಾದ್: ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರಾಯೋಜಿಸುವ ದೀರ್ಘ ಇತಿಹಾಸವನ್ನು ಹೊಂದಿದ್ದು ಪಾಕ್‌ನ ಮಾನವೀಯತೆ ತುಂಬಾನೇ ಅಪಾಯಕಾರಿ ಎಂದು ಎಐಎಂಐಎಂನಾಯಕ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತದ ಇತ್ತೀಚಿನ ಆಪರೇಷನ್ ಸಿಂಧೂರ್ ನಂತರ ಸರ್ಕಾರದ ಸರ್ವಪಕ್ಷ ನಿಯೋಗದಲ್ಲಿ ಸೇರಿಕೊಂಡರು.

ಈ ವೇಳೆ ಮಾತನಾಡಿದ ಅವರು ಪಾಕಿಸ್ತಾನದ ಇಸ್ಲಾಮಿಕ್ ಚಿತ್ರಣ ಬಕ್ವಾಸ್ ಎಂದು ಆಕ್ರೋಶ ಹೊರಹಾಕಿದರು.

ಭಾರತವು ಪಾಕಿಸ್ತಾನದ ನೈಜ ಅಜೆಂಡಾವನ್ನು ಬಹಿರಂಗಪಡಿಸಬೇಕು ಎಂದು ಓವೈಸಿ ಹೇಳಿದರು.  ಈಗಾಗಲೇ ಭಾರತವು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ಬಲಿಯಾಗಿದೆ. ಇದು (ಪಾಕಿಸ್ತಾನದ ಮಾಜಿ ಅಧ್ಯಕ್ಷ) ಮುಹಮ್ಮದ್ ಜಿಯಾ-ಉಲ್-ಹಕ್ ಕಾಲದಲ್ಲಿ ಆರಂಭಗೊಂಡಿತು. ಇದರಿಂದ ಕಂದಹಾರ್ ವಿಮಾನ ಅಪಹರಣ, 26/11 ಮುಂಬೈ ಭಯೋತ್ಪಾದಕ ದಾಳಿ, 2001 ರ ಸಂಸತ್ ದಾಳಿ, ಉರಿ ಮತ್ತು ಪಠಾಣ್‌ಗಾಮ್ ಘಟನೆಗಳು, ಪಹಲ್‌ಗಾಮ್‌ ಘಟನೆಗಳು ಇದರಲ್ಲಿ ಒಳಗೊಂಡಿದೆ.

"ಪಾಕಿಸ್ತಾನವು ತನ್ನನ್ನು ಇಸ್ಲಾಮಿಕ್ ರಾಷ್ಟ್ರವೆಂದು ತೋರಿಸಲು ಪ್ರಯತ್ನಿಸುತ್ತಿದೆ, ಆದರೆ ಭಾರತವು ಸುಮಾರು 20 ಕೋಟಿ ಮುಸ್ಲಿಮರನ್ನು ಹೊಂದಿದೆ" ಎಂದು ಹೇಳಿದರು. ಅವರು ಅಂತಹ ಹಕ್ಕುಗಳನ್ನು "ಬಕ್ವಾಸ್" ಎಂದು ಕರೆದರು ಮತ್ತು "ನಾವು (ಜಗತ್ತಿಗೆ) ಇದರ ಬಗ್ಗೆಯೂ ಹೇಳಬೇಕಾಗಿದೆ" ಎಂದು ಸೇರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ