ಭಾರತದಲ್ಲಿ ರೈಲ್ವೆ ಹಳಿ ಸ್ಫೋಟಿಸಲು ಪಾಕಿಸ್ತಾನದ ಐಎಸ್ ಐ ಸಂಚು!
ಭಾರತದಲ್ಲಿನ ರೈಲ್ವೆ ಹಳಿಗಳನ್ನು ಸ್ಫೋಟಿಸಲು ಪಾಕಿಸ್ತಾನ ಮೂಲದ ಐಎಸ್ ಐ ಸಂಚು ರೂಪಿಸಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಪಂಜಾಬ್ ಹಾಗೂ ಸುತ್ತಮುತ್ತಲ ರಾಜ್ಯಗಳನ್ನು ಕೇಂದ್ರೀಕರಿಸಿದ ಐಎಸ್ ಐ ರೈಲ್ವೆ ಹಳಿಗಳನ್ನು ಉಡಾಯಿಸಲು ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದೆ.
ಭಾರತದಲ್ಲಿ ಇರುವ ಪಾಕಿಸ್ತಾನದ ಸ್ಲಿಪರ್ ಸೆಲ್ ಗಳು ಈ ಬಗ್ಗೆ ಐಎಸ್ ಐ ಸಂಸ್ಥೆಗೆ ಮಾಹಿತಿಗಳನ್ನು ರವಾನಿಸಿವೆ. ಅಲ್ಲದೇ ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ನಿಧಿ ಸಂಗ್ರಹ ನಡೆಯುತ್ತಿದೆ ಎಂದು ವಿವರಿಸಿದೆ.