ಉ. ಕೊರಿಯಾಕ್ಕೆ ಪಾಕ್ ಪರಮಾಣು ಸಾಮಗ್ರಿ ಮಾರಾಟ: ಸಿಐಎ ಸ್ಫೋಟಕ ಮಾಹಿತಿ

ಬುಧವಾರ, 7 ಸೆಪ್ಟಂಬರ್ 2016 (12:17 IST)
ಪಾಕಿಸ್ತಾನ ಉತ್ತರ ಕೊರಿಯಾಗೆ ಪರಮಾಣು ಸಾಮಗ್ರಿಯನ್ನು ಸರಬರಾಜು ಮಾಡುತ್ತಿದೆ ಎಂದು ಅಮೆರಿಕದ ಸಿಐಎ ಭಾರತದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗಕ್ಕೆ ಸ್ಫೋಟಕ ಮಾಹಿತಿಯನ್ನು ಬಿಡುಗಡೆ ಮಾಡಿದೆ. ವರದಿಗಳ ಪ್ರಕಾರ ಪಾಕಿಸ್ತಾನವು ಉತ್ತರ ಕೊರಿಯಾಗೆ ಸಮುದ್ರ ಮಾರ್ಗದ ಮೂಲಕ ಪರಮಾಣು ಸಾಮಗ್ರಿಗಳನ್ನು ಕಳಿಸುತ್ತಿದೆ.
 
ಪಾಕಿಸ್ತಾನ ಅಣು ಇಂಧನ ಆಯೋಗವು ವಿಶ್ವಸಂಸ್ಥೆಯ ದಿಗ್ಬಂಧನಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ, ಪ್ಯೋಂಗ್‌ಯಾಂಗ್‌ಗೆ ಮೊನೆಲ್ ಮತ್ತು ಎನ್‌ಕಾನೆಲ್(ಪರಮಾಣು ಅಸ್ತ್ರಗಳು)ಗಳನ್ನು ಪೂರೈಸಿದೆ.
 
ವಿಶೇಷವೇನೆಂದರೆ, ಇಸ್ಲಮಾಬಾದ್‌ಗೆ ಚೀನಾದ ಕಂಪನಿ ಬೀಜಿಂಗ್ ಸನ್‌ಟೆಕ್ ಟೆಕ್ನಾಲಜಿ ಕಂಪನಿ ಇಂತಹ ಸಾಮಾಗ್ರಿಗಳನ್ನು ಸರಬರಾಜು ಮಾಡಿದೆ. ಚೀನಾದ ಕಂಪನಿಯಿಂದ ಪಾಕಿಸ್ತಾನಕ್ಕೆ ಈ ಪೂರೈಕೆಗಳನ್ನು ಪಾಕಿಸ್ತಾನದ ಅಧಿಕಾರಿಗಳು  ಸರಕುಸಾಗಣೆ ನೌಕೆಯ ಮೂಲಕ ಉತ್ತರ ಕೊರಿಯಾಕ್ಕೆ ಮಾರ್ಗ ಬದಲಿಸಿದ್ದಾರೆ.
 
ಪರಮಾಣು ವಸ್ತುಗಳ ಅಕ್ರಮ ಮಾರಾಟದ ನಡುವೆಯೂ ಪಾಕಿಸ್ತಾನ ಎನ್‌ಎಸ್‌ಜಿಯ ಸದಸ್ಯತ್ವಕ್ಕೆ ಅಂಗೀಕಾರ ನೀಡುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಒತ್ತಾಯಿಸುತ್ತಿರುವುದು ವ್ಯಂಗ್ಯವಾಗಿದೆ. ಇನೊಂದು ಅಪಾಯಕಾರಿ ಬಹಿರಂಗದಲ್ಲಿ, ಪಾಕಿಸ್ತಾನವು  ಉತ್ತರಕೊರಿಯಾಕ್ಕೆ ಅಣ್ವಸ್ತ್ರಗಳನ್ನು ತಯಾರಿಸುವುದಕ್ಕೆ ನೇರ ಸಂಬಂಧ ಹೊಂದಿರುವ ಉಪಕರಣವನ್ನು ನೀಡುತ್ತಿದೆ ಎಂಬ ಮಾಹಿತಿಯನ್ನು ಕೂಡ ಕೆಲವು ಮೂಲಗಳು ನೀಡಿವೆ.

ವೆಬ್ದುನಿಯಾವನ್ನು ಓದಿ