ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆ ರಫ್ತನ್ನು ಮೌನವಾಗಿ ಸಹಿಸಿದ್ದಾಯ್ತು. ಉರಿ ಹಾಗೂ ಪಠಾಣ್‌ಕೋಟ್‌ನಲ್ಲಿ ಉಗ್ರರು ನಡೆಸಿದ ಪೈಶಾಚಿಕ ದಾಳಿಯಲ್ಲಿ ಬಹಳಷ್ಟನ್ನು ಕಳೆದುಕೊಂಡಿದ್ದೇವೆ. ರಾಜತಾಂತ್ರಿಕ ಉಪಕ್ರಮಗಳು ಸಹ ಯಾವ ಪ್ರಯೋಜನಕ್ಕೂ ಬಂದಿಲ್ಲ. ಪಾಕಿಸ್ತಾನ ಮಾತ್ರ ತನ್ನ ಉದ್ಧಟನವನ್ನು ಮುಂದುವರೆಸಿದ್ದು ಇದಕ್ಕೆ ತಕ್ಕ ಪ್ರತಿಫಲ ಅದಕ್ಕೆ ಸಿಗಲಿದೆ ಎಂದಿದ್ದಾರೆ ಜೇಟ್ಲಿ.
ಭಾರತ ಹೆಚ್ಚು ಪೂರ್ವಭಾವಿ ವಿಧಾನ ಅನುಸರಿಸಬೇಕಿದೆ ಎಂದ ಜೇಟ್ಲಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ ಬಳಿಕ ಪಾಕ್ ಪದೇ ಪದೇ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿದೆ. ಉಗ್ರರ ಉಪಟಳ ಮೀತಿಮೀರಿದೆ. ನಮ್ಮ ನಾಗರಿಕರು ಮತ್ತು ಸೈನಿಕರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಪಾಕ್ ಇದಕ್ಕೆ ತಕ್ಕ ಪ್ರತಿಫಲವನ್ನು ಪಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.