ಜಯಲಲಿತಾ ಸಾವಿನ ತನಿಖೆಗೆ ಕೋರಿ ರಾಷ್ಟ್ರಪತಿಗೆ ಮನವಿ

ಮಂಗಳವಾರ, 28 ಫೆಬ್ರವರಿ 2017 (15:18 IST)
ಜಯಲಲಿತಾ ಸಾವಿನ ಪ್ರಕರಣ ರಾಷ್ಟ್ರಪತಿಗಳ ಅಂಗಳ ತಲುಪಿದೆ. ಜಯಲಲಿತಾ ಸಾವಿನ ಕುರಿತಂತೆ ಇನ್ನೂ ಸಹ ನಿಗೂಢತೆ ಮುಂದುವರೆದಿದ್ದು, ಈ ಕುರಿತಂತೆ ತನಿಖೆ ನಡೆಸುವಂತೆ ಕೋರಿ ತಮಿಳುನಾಡಿನ ಮಾಜಿ ಸಿಎಂ ಪನ್ನೀರ್ ಸೆಲ್ವಂ ಬಣ ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ.  


ಅಣ್ಣಾಡಿಎಂಕೆ ರಾಜ್ಯಸಭಾ ಸಂಸದ ಡಾ.ವಿ. ಮೈತ್ರೇಯನ್ ನೇತೃತ್ವದ ನಿಯೋಗ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಮನವಿ ಸಲ್ಲಿಸಿದೆ.

ಸೆಪ್ಟೆಂಬರ್ 22, 2016ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ, ಡಿಸೆಂಬರ್ 5, 2016ರಂದು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿತ್ತು. ಜಯಲಲಿತಾ ಆಸ್ಪತ್ರೆಯಲ್ಲಿದ್ದ ಒಂದೇ ಒಂದು ಫೋಟೋ ಬಿಡುಗಡೆಯಾಗಿರಲಿಲ್ಲ. ಆಸ್ಪತ್ರೆಯಲ್ಲಿದ್ದಷ್ಟು ದಿನ ನಾನಾ ಊಹಾಪೋಹಗಳು ಹರಿದಾಡುತ್ತಿದ್ದರೂ ಆಸ್ಪತ್ರೆಯಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಹೊರಜಗತ್ತಿಗೆ ಎಳ್ಲಷ್ಟೂ ಮಾಹಿತಿ ಇರಲಿಲ್ಲ.

ವೆಬ್ದುನಿಯಾವನ್ನು ಓದಿ