ತಿಂಗಳಿಗೊಮ್ಮೆ 100 ಕೋಟಿ ಕಪ್ಪ ಕೊಡಲು ಸಚಿನ್ ವಾಝೆಗೆ ತಾಕೀತು ಮಾಡಿದ್ದ ಮಹಾ ಗೃಹಸಚಿವ!
ನಿರ್ಗಮಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿರುವ ಪರಂಬೀರ್ ಸಿಂಗ್ ಗೃಹಸಚಿವರು ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು, ಹಣ ಸಂಗ್ರಹಿಸುವಂತೆ ಬೇಡಿಕೆಯಿಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಇದು ಭಾರೀ ಸಂಚಲನ ಮೂಡಿಸಿದೆ. ಇನ್ನೊಂದೆಡೆ ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಅನಿಲ್ ದೇಶ್ ಮುಖ್ ಅಧಿಕಾರ ಕಳೆದುಕೊಂಡ ಹತಾಶೆಯಲ್ಲಿ ಪರಂಬೀರ್ ಸಿಂಗ್ ಇಂತಹ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.