ಮಾಜಿ ಗೆಳೆಯನ ನಿಶ್ವಿತಾರ್ಥದಿಂದ ಅಸಮಾಧಾನಗೊಂಡ ಯುವತಿ ಮಾಡಿದ್ದೇನು ಗೊತ್ತಾ?
ಶನಿವಾರ, 20 ಮಾರ್ಚ್ 2021 (09:04 IST)
ಬರೇಲಿ : ಮಾಜಿ ಗೆಳೆಯ ಬೇರೆ ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾದ ಹಿನ್ನಲೆಯಲ್ಲಿ ಅಸಮಾಧಾನ ಗೊಂಡಿದ್ದ ಯುವತಿಯೊಬ್ಬಳು ಆತನ ಮೇಲೆ ಅತ್ಯಾಚಾರದ ಆರೋಪ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ತನ್ನ ಜೊತೆ ಬಾಡಿಗಾರ್ಡ್ಸ್ ನ್ನು ಕರೆದುಕೊಂಡು ನಿಶ್ಚಿತಾರ್ಥ ಸ್ಥಳಕ್ಕೆ ಬಂದ ಯುವತಿ ವರ ತನ್ನನ್ನು ಮದುವೆಯಾಗುವುದಾಗಿ ಹೇಳಿ ಮಾನಭಂಗ ಎಸಗಿ ಈಗ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ಇದರಿಂದ ಅಲ್ಲಿ ದೊಡ್ಡ ವಾಗ್ವಾದ ನಡೆದಿದೆ. ಇದರಿಂದ ನಿಶ್ಚಿತಾರ್ಥ ರದ್ದುಗೊಂಡಿದೆ.
ಈ ಬಗ್ಗೆ ಇಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.