ವೇಶ್ಯಾಗೃಹಕ್ಕೆ ತೆರಳುವುದು ಅಪರಾಧಿಯಲ್ಲ !
ಅಪರಾಧಗಳನ್ನಾಗಿ ಹೊಣೆ ಮಾಡಲಾಗುವುದಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ. ಇತ್ತೀಚೆಗೆ ಅರ್ಜಿಯೊಂದನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜೋಯ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠವು ಈ ತೀರ್ಪು ನೀಡಿದೆ.
ಅಲ್ಲದೆ ಗ್ರಾಹಕರಾಗಿ ಲೈಂಗಿಕ ಕಾರ್ಯಕರ್ತೆಯರ ಮನೆಗೆ ಭೇಟಿ ನೀಡುವುದು ಲೈಂಗಿಕ ಸುಖಕ್ಕಾಗಿಯೇ ಅಲ್ಲ. ಯಾವುದೋ ಸಂದರ್ಭದಲ್ಲಿ ಅವರು ಭೇಟಿ ನೀಡಿರುತ್ತಾರೆ ಎಂಬ ಅಂಶವನ್ನೂ ನ್ಯಾಯಾಲಯ ಉಲ್ಲೇಖಿಸಿದೆ.
2019ರ ಜನವರಿ 4 ರಂದು ಪೊಲೀಸ್ ದಾಳಿ ವೇಳೆ ಬಂಧಿಸಲ್ಪಟ್ಟ ಎನ್ಆರ್ಐ ಉದ್ಯಮಿ ಸುರೇಶ್ ಬಾಬು ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿದೆ.