ಭಾರತವನ್ನು ನಿಂದಿಸಿದ ಡೊನಾಲ್ಡ್ ಟ್ರಂಪ್ ಮಾತು ಕೇಳಿದ್ರೆ ರೊಚ್ಚಿಗೇಳ್ತೀರಿ

Krishnaveni K

ಗುರುವಾರ, 31 ಜುಲೈ 2025 (12:37 IST)
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ದುಬಾರಿ ಸುಂಕ ಹಾಕಿದ್ದಲ್ಲದೆ ಈಗ ಹಿಗ್ಗಾಮುಗ್ಗಾ ನಿಂದಿಸಿದ್ದು ನೋಡಿದರೆ ನೀವು ರೊಚ್ಚಿಗೇಳ್ತೀರಿ.

ಭಾರತ ಮತ್ತು ರಷ್ಯಾ ನಡುವಿನ ವ್ಯಾಪಾರ ಒಪ್ಪಂದಗಳು ಅಮೆರಿಕಾ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಕಾರಣ ನೀಡಿ ಭಾರತದ ಮೇಲೆ 25% ದುಬಾರಿ ಸುಂಕ ವಿಧಿಸಿತ್ತು. ಇದರ ಜೊತೆಗೆ ಈಗ ಭಾರತ ಮತ್ತು ರಷ್ಯಾವನ್ನು ಡೊನಾಲ್ಡ್ ಟ್ರಂಪ್ ಇನ್ನಿಲ್ಲದಂತೆ ನಿಂದಿಸಿದ್ದಾರೆ.

ಭಾರತ ಮತ್ತು ರಷ್ಯಾದ್ದು ಸತ್ತ ಆರ್ಥಿಕತೆ ಎಂದಿದ್ದಾರೆ. ರಷ್ಯಾ ಜೊತೆ ಭಾರತ ಏನು ವ್ಯವಹಾರ ಮಾಡುತ್ತದೆ ಎಂದು ತಿಳಿದುಕೊಂಡು ನನಗೇನೂ ಆಗಬೇಕಾಗಿದ್ದಿಲ್ಲ. ಯಾಕೆಂದರೆ ಅವೆರಡೂ ಸತ್ತ ಆರ್ಥಿಕತೆ (ಡೆಡ್ ಎಕಾನಮಿ) ರಾಷ್ಟ್ರಗಳು. ಅವೆರಡೂ ನೆಲಕಚ್ಚಿ ಹೋಗಲಿ’ ಎಂದು ಟ್ರಂಪ್ ಹಿಡಿಶಾಪ ಹಾಕಿದ್ದಾರೆ.

ಆಗಸ್ಟ್ 1 ರಿಂದ ಭಾರತದ ವಸ್ತುಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಭಾರತದೊಂದಿಗೆ ನಾವು ಕಡಿಮೆ ವ್ಯವಹಾರ ಮಾಡಿದ್ದೇವೆ. ಭಾರತ ಅತ್ಯಂತ ಹೆಚ್ಚು ಸುಂಕ ವಿಧಿಸುವ ರಾಷ್ಟ್ರ ಎಂದು ತಮ್ಮ ಹತಾಶೆ ಹೊರಹಾಕಿದ್ದಾರೆ.


ಇದೂ ಸಾಲದೆಂಬಂತೆ ಭಾರತದ ಶತ್ರುರಾಷ್ಟ್ರ ಪಾಕಿಸ್ತಾನ ಜೊತೆ ತೈಲ ಒಪ್ಪಂದ ಮಾಡಿಕೊಂಡು ಭಾರತಕ್ಕೆ ಏಟು ಕೊಡಲು ಮುಂದಾಗಿದೆ. ಆದರೆ ಅಮೆರಿಕಾದ ಈ ಯಾವ ಬೆದರಿಕೆಗೂ ಜಗ್ಗಲ್ಲ ಎಂದು ಭಾರತ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ