ಧರ್ಮಸ್ಥಳದಲ್ಲಿ ಕೊನೆಗೂ ಪತ್ತೆಯಾಯ್ತು ಮೂಳೆ: ಹೇಗಿತ್ತು ಶವದ ಸ್ಥಿತಿ ಇಲ್ಲಿದೆ ವಿವರ

Krishnaveni K

ಗುರುವಾರ, 31 ಜುಲೈ 2025 (14:22 IST)

ಮಂಗಳೂರು: ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳಿಗಾಗಿ ಹುಡುಕಾಟ ನಡೆಸುತ್ತಿರುವ ಎಸ್ಐಟಿ ತಂಡಕ್ಕೆ ಇಂದು ಕೊನೆಗೂ ಯಶಸ್ಸು ಸಿಕ್ಕಿದೆ. 6 ನೇ ಪಾಯಿಂಟ್ ನಲ್ಲಿ ಮೂಳೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಇಂದು ಸತತ ಮೂರನೇ ದಿನ ಅಜ್ಞಾತ ದೂರುದಾರನನ್ನು ಕರೆದುಕೊಂಡು ನೇತ್ರಾವತಿ ನದಿ ಸಮೀಪದ ಕಾಡು ಪ್ರದೇಶದಲ್ಲಿ ಎಸ್ಐಟಿ ತಂಡ ಹೂತಿಟ್ಟ ಶವದ ಅವಶೇಷಕ್ಕಾಗಿ ಶೋಧ ನಡಸುತ್ತಿದೆ. ಕಳೆದ ಎರಡೂ ದಿನ 5 ಕಡೆ ಅಗೆದರೂ ಏನೂ ಪತ್ತೆಯಾಗಿರಲಿಲ್ಲ.

ಆದರೆ ಇಂದು 6 ನೇ ಸ್ಥಳದಲ್ಲಿ ಅಸ್ಥಿಪಂಜರದ ಮೂಳೆಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಅಸ್ಥಿಪಂಜರದ ಕೆಲವು ಮೂಳೆಗಳು ಪತ್ತೆಯಾಗಿದೆ. ತಕ್ಷಣವೇ ಪೊಲೀಸರು ಇದನ್ನು ಸಂಗ್ರಹಿಸಿ ಎಫ್ಎಸ್ಎಲ್ ವರದಿಗೆ ರವಾನಿಸಿದೆ. ಇಲ್ಲಿ ಬೆಳಿಗ್ಗೆಯಿಂದ ಅಗೆಯುವ ಕಾರ್ಯ ನಡೆಯುತ್ತಿತ್ತು.

ಆರು ಮತ್ತು ಏಳನೇ ಪಾಯಿಂಟ್ ನಲ್ಲಿ ಶವ ಇದ್ದೇ ಇರುತ್ತದೆ. ಸುಮಾರು 8 ಶವಗಳನ್ನು ಹೂತುಹಾಕಿದ್ದೇನೆ ಎಂದು ದೂರುದಾರ ಹೇಳಿದ್ದ. ಅದರಂತೆಯೇ ಈಗ ಆರನೇ ಪಾಯಿಂಟ್ ನಲ್ಲಿ ಅವಶೇಷಗಳು ಪತ್ತೆಯಾಗಿರುವುದು ದೊಡ್ಡ ಟ್ವಿಸ್ಟ್ ಸಿಕ್ಕಂತಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ