ಏರ್ ಇಂಡಿಯಾ ವಿಮಾನದಲ್ಲಿ ಒದ್ದಾಡಿದ ಪ್ರಯಾಣಿಕರು

ಸೋಮವಾರ, 3 ಜುಲೈ 2017 (14:04 IST)
ನವದೆಹಲಿ: ಏರ್ ಇಂಡಿಯಾ ವಿಮಾನ ಸಂಸ್ಥೆ ಆಗಾಗ ಅವ್ಯವಸ್ಥೆಯ ಕಾರಣಕ್ಕೆ ಸುದ್ದಿಯಾಗುತ್ತದೆ. ಆದರೆ ಈ ಬಾರಿ ಅದು ಕೊಂಚ ಅತಿರೇಕಕ್ಕೆ ಹೋಗಿದೆ. ಎಸಿ ವ್ಯವಸ್ಥೆ ಕೈಕೊಟ್ಟು ಪ್ರಯಾಣಿಕರು ಉಸಿರುಗಟ್ಟುವಂತಹ ಪರಿಸ್ಥಿತಿ ಎದುರಿಸುವಂತಾಯಿತು.


ಇದು ಪಶ್ಚಿಮ ಬಂಗಾಲದಿಂದ ದೆಹಲಿಗೆ ತೆರಳುತ್ತಿದ್ದ  ವಿಮಾನದಲ್ಲಿ ನಡೆದ ಘಟನೆ. ಎಸಿ ವ್ಯವಸ್ಥೇ ಕೈಕೊಟ್ಟು ಪ್ರಯಾಣಿಕರು ಬೆವರಿಳಿಸುವಂತಾಯಿತು. ಕೈಯಲ್ಲಿದ್ದ ಮ್ಯಾಗಜಿನ್, ಟವೆಲ್ ಹಿಡ್ಕೊಂಡು ಪ್ರಯಾಣಿಕರು ಗಾಳಿ ಹಾಕಿದರೂ,  ಪ್ರಯೋಜನವಾಗಲಿಲ್ಲ. ಕೆರಳಿದ ಪ್ರಯಾಣಿಕರು ವಿಮಾನ ಸಿಬ್ಬಂದಿ ಮೇಲೆ ತಿರುಗಿಬಿದ್ದರು.

ಇದನ್ನು ಚಿತ್ರೀಕರಿಸುತ್ತಿದ್ದ ಪ್ರಯಾಣಿಕರೊಬ್ಬರ ಮೇಲೆ ಸಿಬ್ಬಂದಿಗಳು ರೇಗಿದ ಪ್ರಸಂಗವೂ ನಡೆಯಿತು. ಈ ವಿಚಾರ ಟ್ವಿಟರ್ ನಲ್ಲೂ ಸದ್ದು ಮಾಡಿದೆ. ಎಸಿ ಮತ್ತು ಆಕ್ಸಿಜನ್ ವ್ಯವಸ್ಥೇಯಿಲ್ಲದೇ ವಿಮಾನದಲ್ಲಿ 310 ಪ್ರಯಾಣಿಕರನ್ನು ಹೇರಿಕೊಂಡು ಹೋಗಲು ಇವರಿಗೆ ಒಪ್ಪಿಗೆ ಕೊಟ್ಟವರಾರು ಎಂದು ಕೆಲವರು ಪ್ರಶ್ನಿಸಿದ್ದಾರೆ. ಅಂತೂ ಏರ್ ಇಂಡಿಯಾ ಆಗಾಗ ಇಂತಹ ಮುಜುಗರದ ಪ್ರಸಂಗ ಎದುರಿಸುತ್ತಿರುವುದಂತೂ ಸತ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ