Pehalgam terror attack: ಪ್ಯಾಂಟ್ ಹಿಡಿದೆಳೆದು ಹಿಂದೂ ಎಂದು ಕನ್ ಫರ್ಮ್ ಮಾಡಿ ಕೊಂದೇ ಬಿಟ್ಟ ಉಗ್ರರು

Krishnaveni K

ಮಂಗಳವಾರ, 22 ಏಪ್ರಿಲ್ 2025 (20:35 IST)
ಜಮ್ಮು ಕಾಶ್ಮೀರ: ಪೆಹಲ್ಗಾಮ್ ನಲ್ಲಿ ಇಂದು ನಡೆದ ಉಗ್ರ ದಾಳಿಯ ಒಂದೊಂದೇ ಕರಾಳತೆ ಈಗ ಬಯಲಾಗುತ್ತಿದೆ. ಪ್ರವಾಸಿಗರ ಧರ್ಮ ಯಾವುದೆಂದು ಕನ್ ಫರ್ಮ್ ಮಾಡಲು ಉಗ್ರರು ಪ್ಯಾಂಟ್ ಎಳೆದು ನೋಡಿದರು ಎಂದು ಹೇಳಲಾಗುತ್ತಿದೆ.

ಪುರುಷರನ್ನೇ ಟಾರ್ಗೆಟ್ ಮಾಡಿ ಅದರಲ್ಲೂ ಹಿಂದೂ ಧರ್ಮದವರೇ ಎಂದು ಕನ್ ಫರ್ಮ್ ಮಾಡಿಕೊಂಡೇ ಉಗ್ರರು ತೀರಾ ಹತ್ತಿರದಿಂದಲೇ ಗುಂಡು ಹಾರಿಸಿ ಕೊಂದಿದ್ದಾರೆ. ಎಲ್ಲರ ಧರ್ಮ ಯಾವುದು, ಹೆಸರೇನು ಎಂದು ಕೇಳಿದ ಉಗ್ರರು ಹಿಂದೂ ಎಂದು ಕನ್ ಫರ್ಮ್ ಮಾಡಲು ಪ್ಯಾಂಟ್ ಎಳೆದು ನೋಡಿದ್ದಾರೆ ಎನ್ನಲಾಗಿದೆ. ಜೊತೆಗೆ ಐಡಿ ಕಾರ್ಡ್ ಕೂಡಾ ಚೆಕ್ ಮಾಡಿದ್ದಾರೆ.

ಹಿಂದೂ ಎಂದ ಕೂಡಲೇ ಗುಂಡು ಹೊಡೆದು ಸಾಯಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ನಾವಿಲ್ಲಿ ಜಾತಿ ಜಾತಿ ಎಂದು ಹೊಡೆದಾಡಿಕೊಳ್ಳುತ್ತಿದ್ದಾರೆ. ಉಗ್ರರು ಧರ್ಮ ಯಾವುದು ಎಂದು ತಿಳಿದುಕೊಂಡು ಸಾಯಿಸಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ