Pehalgam terror attack: ದಾಳಿ ನಡೆಸುತ್ತಿರುವ ಉಗ್ರರ ವಿಡಿಯೋ ವೈರಲ್
ಪೆಹಲ್ಗಾಮ್ ನಲ್ಲಿ ತಮ್ಮ ಪಾಡಿಗೆ ತಾವು ಪ್ರವಾಸ ಎಂಜಾಯ್ ಮಾಡಿಕೊಂಡಿದ್ದ ಪ್ರವಾಸಿಗರ ಮೇಲೆ ಏಕಾಏಕಿ ಸೇನಾ ಸಮವಸ್ತ್ರ ಧರಿಸಿಕೊಂಡು ಬಂದಿದ್ದ ಉಗ್ರರು ಗುಂಡಿನ ಮಳೆಗೆರೆದಿದ್ದರು. ನಿಮ್ಮ ಧರ್ಮ ಯಾವುದು ಎಂದು ವಿಚಾರಣೆ ನಡೆಸಿ ಹಿಂದೂ ಧರ್ಮದ ಪುರುಷರ ಮೇಲೆಯೇ ದಾಳಿ ನಡೆಸಿದ್ದರು.
ಇದೀಗ ಉಗ್ರರು ದಾಳಿ ನಡೆಸುತ್ತಿರುವುದು ಮತ್ತು ಪ್ರವಾಸಿಗರು ಭಯದಿಂದ ದಿಕ್ಕಾಪಾಲಾಗಿ ಓಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಉಗ್ರರ ಸ್ಕೆಚ್ ಕೂಡಾ ಬಿಡಿಸಲಾಗಿದೆ.
ಸ್ಥಳೀಯರು ಹೇಳುವ ಪ್ರಕಾರ ಒಟ್ಟು ನಾಲ್ಕು ಮಂದಿ ಉಗ್ರರು ದಾಳಿ ನಡೆಸಿದ್ದಾರೆ. ಈ ಪೈಕಿ ಓರ್ವ ಸ್ಥಳೀಯ ಉಗ್ರನಾಗಿದ್ದರೆ ಇನ್ನು ಮೂವರು ಪಾಕಿಸ್ತಾನ ಮೂಲದ ಉಗ್ರರು ಎನ್ನಲಾಗಿದೆ. ಭಾರತೀಯ ಸೇನೆ ಈಗ ತೀವ್ರ ಶೋಧ ನಡೆಸುತ್ತಿದೆ.