ಸ್ನ್ಯಾಪ್ ಚ್ಯಾಟ್ ಬದಲು ಸ್ನಾಪ್ ಡೀಲ್ ಗೆ ಬಹಿಷ್ಕಾರ ಹಾಕುತ್ತಿರುವ ಜನತೆ!

ಸೋಮವಾರ, 17 ಏಪ್ರಿಲ್ 2017 (05:19 IST)
ನವದೆಹಲಿ: ಭಾರತವನ್ನು ಬಡ ದೇಶ, ಅಲ್ಲಿ ಸಾಮ್ರಾಜ್ಯ ವಿಸ್ತರಿಸಲು ನನಗೆ ಇಷ್ಟವಿಲ್ಲ ಎಂದು ಸ್ನ್ಯಾಪ್ ಚ್ಯಾಟ್ ಆಪ್ ನ ಸಿಇಒ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಲು ಹೋಗಿ ಜನರು ಎಡವಟ್ಟು ಮಾಡಿಕೊಂಡಿದ್ದಾರೆ.

 
ಸ್ನ್ಯಾಪ್ ಚಾಟ್ ಬಹಿಷ್ಕರಿಸಿ ಎಂಬ ಕ್ಯಾಂಪೇನ್ ಭಾರತದಲ್ಲಿ ಆರಂಭವಾಗಿದೆ. ಹೀಗೆ ಮಾಡುವ ಭರದಲ್ಲಿ ಕೆಲವರು ಸ್ನ್ಯಾಪ್ ಡೀಲ್ ಆನ್ ಲೈನ್ ಮಾರಾಟ ಸಂಸ್ಥೆಯನ್ನು ಬಹಿಷ್ಕರಿಸುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

ಇದರಿಂದಾಗಿ ನಷ್ಟವಾಗುತ್ತಿರುವುದು ಸ್ನ್ಯಾಪ್ ಡೀಲ್ ಸಂಸ್ಥೆಗೆ. ಸ್ನ್ಯಾಪ್ ಚಾಟ್ ಆಪ್ ಗಳನ್ನು ಡಿಲೀಟ್ ಮಾಡುವ ಬದಲು ಜನರು ಸ್ನ್ಯಾಪ್ ಡೀಲ್ ಆಪ್ ಗಳನ್ನು ಡಿಲೀಟ್ ಮಾಡುತ್ತಿದ್ದಾರೆ. ಈ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ರವಾನೆಯಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ