ಸಿಮಿ ಕಾರ್ಯಕರ್ತರ ಹತ್ಯೆ ಹಿಂದಿನ ರಾಜಕೀಯ ನಿಲ್ಲಿಸಿ

ಬುಧವಾರ, 2 ನವೆಂಬರ್ 2016 (17:01 IST)
ಸಿಮಿ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ನಡೆಸುತ್ತಿರುವ ಕ್ಷುಲ್ಲಕ ರಾಜಕೀಯವನ್ನು ನಿಲ್ಲಿಸಿ ಎಂದು ಕೇಂದ್ರ ಸಚಿವ ಎಮ್. ವೆಂಕಯ್ಯ ನಾಯ್ಡು ಪ್ರತಿಪಕ್ಷಗಳಿಗೆ ಮಾತಿನೇಟು ನೀಡಿದ್ದಾರೆ. 
ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ನಿಮಿತ್ತ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕೆಲ ಜನರು ಉಗ್ರರ ಬಗ್ಗೆ ಸಹಾನುಭೂತಿ ಹೊಂದಿರುವುದು ಏಕೆಂದು ನನಗರ್ಥವಾಗುತ್ತಿಲ್ಲ. ಕೆಲವರು ಜೈಲಿನಿಂದ ಪರಾರಿಯಾಗಿ ಕಾನೂನು ಮುರಿದವರ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಾರೆ ಇದೀಗ ಅವರಿಗದು ಫ್ಯಾಷನ್ ಆಗಿ ಬಿಟ್ಟಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಮ್. ವೆಂಕಯ್ಯ ನಾಯ್ಡು ಹೇಳಿದ್ದಾರೆ. 
 
ದೇಶವಾಸಿಗಳ ಭದ್ರತೆ ಮತ್ತು ಸುರಕ್ಷತೆ ಮತ್ತು ಭಾರತ ಒಂದು ದೇಶ ಎಂಬ ಭಾವನೆಗಿಂತ ಅವರಿಗೆ ಇಂತವರ ಮೇಲೆ ಹೆಚ್ಚು ಕಾಳಜಿ ಎಂದು ನಾಯ್ಡು ಕಿಡಿಕಾರಿದ್ದಾರೆ.
 
ಭೋಪಾಲ್‌ನ ಸೆಂಟ್ರಲ್ ಜೈಲಿನಿಂದ ಪರಾರಿಯಾಗಿದ್ದ ನಿಷೇಧಿತ ಸಿಮಿ ಸಂಘಟನೆಯ ಎಂಟು ಉಗ್ರರನ್ನು ನಗರದ ಹೊರವಲಯದಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯ್ಯಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ